ಚನ್ನಪಟ್ಟಣ: ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿತ್ತು. ರಾಜಕೀಯವಾಗಿ ನನ್ನ ಮುಗಿಸುವ ಯತ್ನ ನಡೆದಿತ್ತು ಎಂದು ನಿನ್ನೆಯಷ್ಟೇ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಆರೋಪಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ಒಂದೆರಡು ದಿನ ನಾನು ತಡ ಮಾಡಿದ್ರೇ ರಾಜಕೀಯವಾಗಿಯೇ ನನ್ನನ್ನು ಮುಗಿಸುವ ಕಾರ್ಯ ನಡೆದಿತ್ತು ಎಂದು ಹೇಳಿದ್ದಾರೆ.
ಟಿಕೆಟ್ ಕೊಡ್ತೀನಿ, ಕೊಡ್ತೀನಿ ಅಂತಾ ಸತಾಯಿಸಿದ್ರು. ಅಧ್ಯಕ್ಷರು ಟಿಕೆಟ್ ಕೊಡಿಸಿದ್ರೆ ನಾನ್ಯಾಕೆ ಕಾಂಗ್ರೆಸ್ ಸೇರ್ತಿದ್ದೆ? ಎಂದು ಬಿಜೆಪಿ ವಿರುದ್ಧ ಯೋಗೇಶ್ವರ್ ಗುಡುಗಿದ್ದಾರೆ.
ಚನ್ನಪಟ್ಟಣದ ಟಿಕೆಟ್ ಕೇಳಿದಾಗ ಹೆಚ್.ಡಿ.ಕುಮಾರಸ್ವಾಮಿ ಕೂಡ ಹಾರಿಕೆ ಉತ್ತರ ನೀಡಿದರು. ಚನ್ನಪಟ್ಟಣ ಅಲ್ಲೇ ಇದೆ ಎಲ್ಲಿ ಹೋಗಿದೆ…ಅಂತ ಕೇಳಿದರು. ಅಲ್ಲಿಗೆ ನಿಖಿಲ್ ಅವರನ್ನು ಸ್ಪರ್ಧೆಗೆ ಇಳಿಸುವುದು ನಿಖರವಾಗಿ ತಿಳಿದಿತ್ತು. ಹಾಗಾಗಿ ತಡ ಮಾಡದೇ ನಾನು ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296