ಹುಬ್ಬಳ್ಳಿ: ರೇವಣ್ಣಗೆ ಶಿಕ್ಷೆ ವಿಧಿಸಿರುವ ವಿಚಾರದಲ್ಲಿ ಬಿಜೆಪಿಗೇಕೆ ಮುಜುಗರ ಯಾಕಾಗುತ್ತದೆ ಎಂದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ಬಿಜೆಪಿಗೆ ಮುಜುಗರ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಶಿಕ್ಷೆ ಆಗಿದೆ, ನಮಗೆ ಮುಜುಗರ ಯಾಕೆ ಆಗುತ್ತೆ? ಕಾಂಗ್ರೆಸ್ ನವರು ಯಾವ ಯಾವ ಅಪರಾಧಿಗಳ ಜೊತೆ ಇದ್ರು ಗೊತ್ತಾ? ಖಲಿಸ್ತಾನಿ ಟೆರರಿಸ್ಟ್ ಜೊತೆ ರಾಹುಲ್ ಗಾಂಧಿ ಫೋಟೋ ಇದೆ. ಯಾಸಿನ್ ಮಲ್ಲಿಕ್ ಜೊತೆ ಇಲ್ಲಿರುವವರ ಫೋಟೋ ಇದೆ. ಅವರದ್ದು ಸಪ್ರೇಟ್ ಪಕ್ಷ, ನಮ್ಮದು ಅಲೈನ್ಸ್ ಆಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಿದೆ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.
ಇನ್ನೂ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಎಸ್ ಐಟಿ ಮಾಡಿದ್ದಾರೆ, ತನಿಖೆ ಆಗಲಿ. ಭಾರೀ ಅಪರಾಧ ಆಗಿದೆ ಅಂತ ಮೊದಲೇ ಬಿಂಬಿಸೋದು ಸರಿಯಲ್ಲ. ವೀರೇಂದ್ರ ಹೆಗಡೆ ಅವರು ತನಿಖೆ ಮಾಡಲಿ ಅಂತ ಅಂದಿದ್ದಾರೆ, ಎಸ್ ಐಟಿ ನೀವೇ ಮಾಡಿದ್ದೀರಿ, ಯಾಕೆ ಅವಸರ ಮಾಡ್ತೀರಿ? ಎಂದು ಪ್ರಶ್ನಿಸಿದ್ರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC