ಬಿಗ್ ಬಾಸ್ ಮನೆಯಲ್ಲಿ ಪಾತ್ರೆ ತೊಳೆದಿದ್ದಕ್ಕೆ ಲಾಯರ್ ಜಗದೀಶ್ ಪತ್ನಿ, ಜಗದೀಶ್ ಅವರು ಮನೆಗೆ ಬರುತ್ತಿದ್ದಂತೆಯೇ ಅಡುಗೆ ಮನೆಗೆ ಕಳುಹಿಸಿ ಪಾತ್ರೆ ತೊಳೆಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪಾತ್ರೆ ತೊಳೆಯುತ್ತಾರೆ, ಇಲ್ಲಿಯೂ ತೊಳೆಯಲಿ ಬಿಡಿ ಅಂದಿದ್ದಾರೆ ಜಗದೀಶ್ ಪತ್ನಿ. ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಮಟ್ಟದಲ್ಲಿ ಸದ್ದ ಮಾಡಿದ ಲಾಯರ್ ಜಗದೀಶ್. ಮೂರು ವಾರ ಕಳೆಯುವುದರ ಒಳಗೆ ಬಿಗ್ ಬಾಸ್ ನಿಂದ ಹೊರ ಬಿದ್ದಿದ್ದಾರೆ. ಆದ್ರೆ ಹೊರಗಡೆ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ಜಗದೀಶ್ ಅವರು ಜಗಳಕ್ಕೆ ಮಾತ್ರ ನಿಲ್ಲುತ್ತಿರಲಿಲ್ಲ. ಅವರು ಅಗತ್ಯ ಬಂದಾಗ ಪಾತ್ರೆ ತೊಳೆಯುತ್ತಿದ್ದರು. ಹಗಲು ರಾತ್ರಿ ಎನ್ನದೆ ಸಿಕ್ಕ ಸಿಕ್ಕಾಗಲೆಲ್ಲ ಅಡುಗೆ ಮನೆಯ ವಾಶ್ ಬೇಸ್ನಲ್ಲಿ ನಿಲ್ಲುತ್ತಿದ್ದರು. ಇದನ್ನು ಗಮನಿಸಿರುವ ಅವರ ಪತ್ನಿ, ಜಗದೀಶ್ ಮನೆಗೆ ಬರುತ್ತಿದ್ದಂತೆಯೇ ಪಾತ್ರೆ ತೊಳೆಸಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಈ ಫನ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296