ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ಸಿನಿಮಾ ಆಗಸ್ಟ್ 1ರಂದು ರಿಲೀಸ್ ಆಯಿತು. ಇದೀಗ ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆ ಹಂಚುವವರ ವಿರುದ್ಧ ಪುಷ್ಪಾ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಯೂಟ್ಯೂಬ್ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಮ್ಮ ಸಿನಿಮಾದ ಪ್ರಚಾರ ನೋಡಿ ಕೆಲವರು ನೆಗೆಟಿವ್ ಟಾಕ್ ಹಬ್ಬಿಸಿದ್ದರು. ಸಿನಿಮಾ ಮಾಡುವವರಿಗೆ ನಿಜಕ್ಕೂ ಕಷ್ಟ ಇದೆ. ಇಲ್ಲಿ ನೂರು ತೊಂದರೆ ಇದೆ. ಮುಖ್ಯಮಂತ್ರಿ ಎದುರು ಹೋಗ್ತೀನಿ. ಇದನ್ನು ತಡೆಯಿರಿ ಎಂದು ಕೇಳುತ್ತೇನೆ. ಇದು ಸರ್ಕಾರದ ಕೆಲಸ’ ಎಂದು ಪುಷ್ಪಾ ಹೇಳಿದ್ದಾರೆ.
ಸಿನಿಮಾ ನೋಡಿ ಬರೆದರೆ ತೊಂದರೆ ಇಲ್ಲ. ಆದರೆ, ಸುಮಾರು ಜನರು ಸಿನಿಮಾ ನೋಡದೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇದರಿಂದ ಅನೇಕರಿಗೆ ತೊಂದರೆ ಆಗುತ್ತಿದೆ. ನಾವು ದೂರು ತೆಗೆದುಕೊಂಡು ಬಂದಾಗ ಇದನ್ನು ಸ್ವೀಕರಿಸಬೇಕು. ಇಲ್ಲವಾದಲ್ಲಿ ರಾಕ್ ಲೈನ್ ವೆಂಕಟೇಶ್ಗೆ ಹೇಳಿ ಉಗ್ರ ಹೋರಾಟ ಮಾಡುತ್ತೇವೆ’ ಎಂದಿದ್ದಾರೆ.
ಕನ್ನಡ ಸಿನಿಮಾ ಓಡದೇ ಇರುವುದಕ್ಕೆ ಇಂತಹ ಕುತಂತ್ರಗಳೇ ಕಾರಣ ಎಂದಿರುವ ಪುಷ್ಪಾ, ನನ್ನ ದುಡ್ಡು ನಾನು ತಡೆದುಕೊಳ್ಳುತ್ತೇನೆ. ಆದರೆ, ಇನ್ನೊಬ್ಬರಿಗೆ ಕಷ್ಟ ಆಗಬಹುದು. ನಾವು ಒಂದು ನಿರ್ಧಾರಕ್ಕೆ ಬರಲೇಬೇಕು ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC