ದಾವಣಗೆರೆ: ಹೊಟೇಲ್ ಮೇಲೆ ದಾಳಿ ನಡೆಸಿದ ಪೊಲೀಸರು ವೀಕೆಂಡ್ ಪಾರ್ಟಿಯಲ್ಲಿ ತೊಡಗಿದ್ದ ಯುವಕ-ಯುವತಿಯರಿಗೆ ಶಾಕ್ ನೀಡಿದ ಘಟನೆ ದಾವಣಗೆರೆ ಜಿಲ್ಲೆಯ ಮಿಟ್ಲಕಟ್ಟೆ ಗ್ರಾಮದಲ್ಲಿ ನಡೆದಿದ್ದು, ಇಲ್ಲಿನ ದಿ ಸ್ಟೇಜ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆನ್ನಾಲಾಗಿದೆ.
ವರದಿಗಳ ಪ್ರಕಾರ, ದಿ ಸ್ಟೇಜ್ ಹೋಟೆಲ್ ನಲ್ಲಿ ವೀಕೆಂಡ್ ನಲ್ಲಿ ಶುಕ್ರವಾರ ರಾತ್ರಿಯಿಂದ ಭಾನುವಾರದ ವರೆಗೂ ಪ್ರತಿವಾರ ಡ್ರಿಂಕ್ಸ್ ಪಾರ್ಟಿ ನಡೆಯುತ್ತದೆ, ಕಪಲ್ಸ್ ಗಳಿಗೆ ಮಾತ್ರ ಹೋಟೆಲ್ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
ಪಾರ್ಟಿಯಲ್ಲಿ ಡಿಜೆ ಸಾಂಗ್, ಡ್ರಿಂಕ್ಸ್ ಜತೆ ಮಾದಕ ವಸ್ತು ಸೇವನೆ ಕೂಡ ಮಾಡಲಾಗುತ್ತಿದೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆನ್ನಲಾಗಿದ್ದು, ಘಟನೆಯಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz