ಯಾರೋ ನನ್ನ ಬಗ್ಗೆ ಇಲ್ಲದ ವದಂತಿ ಹಬ್ಬಿಸಿ, ಬಾಯಿಗೆ ಬಂದಂತೆ ಅಬ್ಬರಿಸಿ ಬೊಬ್ಬಿರಿದು, ನನ್ನ ಬಾಯಿ ಮುಚ್ಚಿಸಬಹುದು ಎಂದುಕೊಂಡಿದ್ದರೆ, ಅದು ಸಾಧ್ಯವಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ನಾನು ಹೇಳಿದ್ದು, ಕೇವಲ ಒಂದು ಸಮುದಾಯದ ಮತಗಳಿಂದ ಮುಖ್ಯಮಂತ್ರಿಗಳಾಗಲು ಸಾಧ್ಯವಿಲ್ಲ. ಎಲ್ಲ ಸಮುದಾಯದವರ ಬೆಂಬಲ, ಆಶೀರ್ವಾದ ಇದ್ದರೆ ಮಾತ್ರ ರಾಜ್ಯದ ಸಿಎಂ ಆಗಲು ಸಾಧ್ಯ ಎಂದು. ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆಯೇ ಹೊರತು, ನಾನು ಒಗ್ಗಲಿಗರ ಬಗ್ಗೆ ಆಗಲಿ, ಅಥವಾ ಯಾವುದೇ ಸಮುದಾಯದ ಬಗ್ಗೆ ಎಲ್ಲಿಯೂ ತಪ್ಪು ಹೇಳಿಕೆ ನೀಡಿಲ್ಲ ಎಂದು ಜಮೀರ್ ಅಹ್ಮದ್ ಹೇಳಿದರು.
ಒಕ್ಕಲಿಗರ ಸಮುದಾಯದ ಮೇಲೆ ನನಗೆ ಅಪಾರ ಗೌರವ, ಅಭಿಮಾನವಿದೆ. ನಾನು ಒಕ್ಕಲಿಗರ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ಎಐಸಿಸಿ ಯಿಂದ ನೋಟಿಸ್ ಬಂದಿದೆ ಎಂಬುದು ಸುಳ್ಳು. ನಾನು ಏನೂ ತಪ್ಪು ಮಾತನಾಡಿಯೇ ಇಲ್ಲ ಎಂದ ಮೇಲೆ ನನಗೇಕೆ ನೋಟೀಸ್ ನೀಡುತ್ತಾರೆ ಎಂದು ಅವರು ಪ್ರಶ್ನಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz