ಪಾವಗಡ: ಪ್ರಸಕ್ತ ಸಾಲಿಗೆ ಎಸ್ ಎಸ್ ಎಲ್ ಸಿ, ಸಿಬಿಎಸ್ ಸಿ ಪರೀಕ್ಷೆ ಫಲಿಶಾಂಶ ಪ್ರಕಟವಾಗಿದ್ದು ಸತತ ಮೂರನೇ ಭಾರಿಗೆ ಪಟ್ಡಣದ ಪ್ರತಿಷ್ಟಿತ ಶ್ರೀ ಶಾಲಾ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಶೇ. ನೂರರಷ್ಟು ಫಲಿತಾಂಶ ಲಭ್ಯವಾಗಿದೆ.
ಪಟ್ಟಣದ ಚಳ್ಳಕೆರೆ ರಸ್ತೆ ಮಾರ್ಗದ ಪಕ್ಕದಲ್ಲಿರುವ ಶ್ರೀ ಶಾಲಾ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಈ ಭಾರಿಯು ಶೇ. 100ರಷ್ಟು ಫಲಿತಾಂಶ ಲಭಿಸಿದೆ. ಜೆ.ಆಕರ್ಷಣಿ ಶೇ.90, ಹಾಗೂ ದ್ವಿತೀಯ ಸ್ಥಾನ ಶಾಲಿನಿ ಶೇ.86.6 ಹಾಗೂ ತೃತೀಯ ಸ್ಥಾನ ದೀಕ್ಷಿತ್ ಶೇ.88.2ರಷ್ಟು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ನಗರದ ಪ್ರತಿಷ್ಟಿತ ಶಾಲೆಯಾದ ಶ್ರೀ ಶಾಲಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಪ್ರಸಕ್ತ ಸಾಲಿಗೆ 36 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 8ಮಂದಿ ಡಿಸ್ಟೆಂಕ್ಷನ್ 20ಮಂದಿ ಪ್ರಥಮ ಶ್ರೇಣಿ ಹಾಗೂ 8ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮೂರನೇ ಭಾರಿಗೂ ಸಿಬಿಎಸ್ ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಶಾಲೆಗೆ ಲಭಿಸಿದೆ.
ತಾಲೂಕಿನಲ್ಲಿಯೇ ಎಸ್ ಎಸ್ ಎಲ್ ಸಿ ಸಿಬಿಎಸ್ ಸಿ ಪರೀಕ್ಷೆಯಲ್ಲಿ ಪ್ರಸಕ್ತ ಸಾಲಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ, ಶಾಲೆಗೆ ಉತ್ತಮ ಫಲಿತಾಂಶ ತಂದು ಕೊಟ್ಡ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ, ಶ್ರೀ ಶಾಲಾ ಇಂಟರ್ ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಲಕ್ಷ್ಮೀ ಡಾ.ಜಿ. ವೆಂಕಟರಾಮಯ್ಯ, ಉಪಾಧ್ಯಕ್ಷರಾದ ಡಾ.ಜಿ. ವೆಂಕಟರಾಮಯ್ಯ, ಡಾ.ಶಶಿಕಿರಣ್ ಹಾಗೂ ಶ್ರೀ ಶಾಲಾ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ಮಂಜುಳನಾಗಭೂಷಣ್ ಹಾಗೂ ಉಸ್ತುವಾರಿ ಮೇಲ್ವಿಚಾರಕ ನಾಗೇಂದ್ರಪ್ಪ, ಶಾಲೆಯ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296