ಬೆಂಗಳೂರು : ಕಳೆದ ವಾರವಷ್ಟೆ ಕೆ.ಜಿ.ಗೆ 50 ರೂ.ಗೆ ದೊರೆಯುತ್ತಿದ್ದ ಟೊಮೆಟೊ, ಈಗ ಏಕಾಏಕಿ 100 ರೂ. ಗಡಿ ದಾಟಿದೆ. ಆ ಮೂಲಕ ಮತ್ತೆ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಟೊಮೆಟೊ ಸೇರಿದಂತೆ ಕಾಯಿಪಲ್ಲೆ, ಹಸಿರುಪಲ್ಲೆಗಳ ದರಗಳು ಏರುತ್ತಿವೆ. ಹೀಗಾಗಿ ಮಾರುಕಟ್ಟೆಗೆ ಹೋಗಬೇಕೆಂದರೆ ಚೀಲ ತುಂಬಾ ಹಣ ತುಂಬಿಕೊಂಡು ಬೇಬಿನಲ್ಲಿ ತರಕಾರಿ ತರುವ ಸ್ಥಿತಿ ಎದುರಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದ ಪರಿಣಾಮ ಬಂದ ಬೆಳೆಯೂ ಹಾಳಾಗುತ್ತಿದೆ. ಜತೆಗೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ತರಕಾರಿ ದೊರೆಯದ ಕಾರಣ ಬೆಲೆ ಏರಿಕೆಯಾಗಿದೆ.
ಹೀರೆಕಾಯಿ ಕೆಜಿಗೆ 120 ರೂ., ಸೌತೆಕಾಯಿ 120 ರೂ., ಚೌಳಿಕಾಯಿ 80 ರೂ., ಬೀನ್ಸ್ 160 ರೂ.,. 6 ನಿಂಬೆ ಹಣ್ಣಿಗೆ 20 ರೂ., 1 ಮೂಲಂಗಿಗೆ 10 ರೂ., ಹೀಗೆ ತರಕಾರಿ ದರ ಏರುಮುಖದಲ್ಲಿ ಸಾಗಿದೆ. ಶನಿವಾರದಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ಹೆಚ್ಚಾಗಿದ್ದು , ಸಾಗಣೆ ವೆಚ್ಚ ಹೆಚ್ಚಾಗುತ್ತಿರುವುದರಿಂದ ಬೆಲೆಗಳು ಮತ್ತಷ್ಟು ಹೆಚ್ಚಾದರೂ ಆಶ್ಚರ್ಯವಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


