ಬೆಂಗಳೂರು: ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಚಿತ್ರ ಪುಷ್ಪ ಸಿನಿಮಾ 17ಕ್ಕೆ ರಿಲೀಸ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಚಿತ್ರ ತಂಡ ಚಿತ್ರದ ಪ್ರಚಾರ ನಡೆಸಿತು. ನಟ ಅಲ್ಲು ಅರ್ಜುನ್ , ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಚಿತ್ರದ ವಿವಿಧ ಕಲಾವಿದರು ಪ್ರಚಾರದಲ್ಲಿ ಭಾಗಿಯಾಗಿದ್ದರು.
ಚಿತ್ರದ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ, 17 ಪುಷ್ಪ ಸಿನಿಮಾ ರಿಲೀಸ್ ಆಗ್ತಿದೆ… ಎನ್ನುತ್ತಲೇ ಯಾವ ಭಾಷೆಯಲ್ಲಿ ಮಾತನಾಡಬೇಕು ಎಂದು ತಿಳಿಯದೇ ಗೊಂದಕ್ಕೀಡಾಗಿ ಜೋರಾಗಿ ನಕ್ಕರು ಬಳಿಕ ಮಾತು ಮುಂದುವರಿಸಿ, ಎಲ್ಲ ಲಾಂಗ್ವೇಜ್ ಮಿಕ್ಸ್ ಆಗಿದೆ ತುಂಬಾ ಹಿಂದೆ ಹೋಗಿ ಬಿಟ್ಟಿದ್ದೇನೆ ಎಂದರು.
ನನ್ನ ಕ್ಯಾರೆಕ್ಟರ್ ಬಗ್ಗೆ ಹೇಳ್ಬೇಕೆಂದ್ರೆ, ನೀವು ಟ್ರೈಲರ್ ನಲ್ಲಿ, ಸಾಂಗ್ಸ್ ನಲ್ಲಿ ನೋಡಿದ್ದೀರಿ ನಿಮಗೆಲ್ಲರಿಗೂ ಖುಷಿಯಾಗಿದೆ ಅಂದ್ಕೊಂಡಿದ್ದೇನೆ. ಪುಷ್ಪಂನಲ್ಲಿ ಚಿತ್ರ ತಂಡ ಹಾರ್ಡ್ ವರ್ಕ್ ಮಾಡಿದೆ. ಅದು ಟ್ರೈಲರ್ ನಲ್ಲಿ, ಸಾಂಗ್ಸ್ ನಲ್ಲಿ ಕಾಣಿಸುತ್ತಿದೆ. ಇದೊಂದು ಟೀಂ ವರ್ಕ್, ನನಗೆ ಏನ್ ಹೇಳ್ಬೇಕು ಅಂತ ಅರ್ಥವಾಗ್ತಿಲ್ಲ, 17ಕ್ಕೆ ನಮ್ಮೆಲ್ಲರ ಹಾರ್ಡ್ ವರ್ಕ್ ಕಾಣಿಸುತ್ತದೆ ಎಂದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700