ತುಮಕೂರು: ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಸಾಂಸ್ಥಿಕೇತರ(ಆಸ್ಪತ್ರೆ ಹೊರತುಪಡಿಸಿ ಮನೆ ಹಾಗೂ ಇತರೆ ಸ್ಥಳ) ಮರಣ ಘಟನೆ ಸಂಭವಿಸಿದ 21 ದಿನದೊಳಗಾಗಿ ನಿಗದಿತ ನಮೂನೆ 4ಎಯಲ್ಲಿ ಮರಣ ಕಾರಣದ ಮಾಹಿತಿಯನ್ನು ಭರ್ತಿ ಮಾಡಿ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಅಗತ್ಯ ದಾಖಲೆಗಳೊಂದಿಗೆ ಪಾಲಿಕೆಯ ಜನನ ಮರಣ ಶಾಖೆಗೆ ಸಲ್ಲಿಸಬೇಕೆಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಮನವಿ ಮಾಡಿದ್ದಾರೆ.
ಸಂಬಂಧಿತರು ನಿಗದಿತ ಅವಧಿಯೊಳಗೆ ಪಾಲಿಕೆಯ ಜನನ ಮರಣ ಶಾಖೆಗೆ ಅರ್ಜಿ ಸಲ್ಲಿಸುವ ಮೂಲಕ ಉಚಿತ ಮರಣ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ನಿಗದಿತ ಅವಧಿ ನಂತರ ಮರಣ ಪ್ರಮಾಣ ಪತ್ರ ಪಡೆಯಲು ತಡ ಶುಲ್ಕವನ್ನು ಸಂದಾಯ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296