ಸರಗೂರು: ಕೋಟೆ ಮಾದರಿಯಲ್ಲಿಯೇ ಸರಗೂರಿನಲ್ಲಿಯೂ ತಾಲೂಕು ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನವನ್ನು ಸರಕಾರದಿಂದ ಕೊಡಿಸಿಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಭರವಸೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆದಿ ಕರ್ನಾಟಕ ಮಹಾಸಭಾ ಕೋಟೆ, ಸರಗೂರು ಘಟಕದಿಂದ ನಡೆದ 2023-2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೂತನ ಸಂಸದರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರಗೂರಿನಲ್ಲಿ ಭವನ ನಿರ್ಮಾಣಕ್ಕೆ ನಿವೇಶನದ ಕೊರತೆ ಇದ್ದು, ಶಾಸಕರು, ತಾಲೂಕು ಆಡಳಿತ ನಿವೇಶನ ಕೊಡಿಸುವುದಾದರೆ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಇದಲ್ಲದೆ ಸರಗೂರು ಪಟ್ಟಣದಲ್ಲಿರುವ ಅಂಬೇಡ್ಕರ್ ಭವನದ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ನೀಡಲಾಗುವುದು. ಜನಾಂಗದವರು ಸಂಘಟನೆಯಲ್ಲಿ ತೊಡಗಿದರೆ ಸಂಪೂರ್ಣವಾಗಿ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.
ಗ್ಯಾರಂಟಿ ಬಡಜನರಿಗೆ ಅನುಕೂಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇರುವುದರಿಂದಲೇ ಐದು ಗ್ಯಾರಂಟಿಗಳನ್ನು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಬಾಳು ಎಂಬಂತೆ ನೀಡಲಾಗಿದೆ. ಗ್ಯಾರಂಟಿ ಬಂದ ಮೇಲೆ ಬಡ ಜನರ ಬದುಕು ಹಸನಾಗಿದೆ. ಸ್ವಾಭಿಮಾನವನ್ನು ಮೈಗೂಡಿಸಿಕೊಂಡಿದ್ದಾರೆ. ಜನರಿಗೆ ಸಂವಿಧಾನ ಸ್ವಾಭಿಮಾನ ಕಲಿಸಿಕೊಟ್ಟಿದೆ. ಬದುಕುವ ಹಕ್ಕು ಸಂವಿಧಾನದಲ್ಲಿದೆ. ಸರಕಾರ ಜನಪರ, ಶೋಷಿತರ ಪರ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಹಿಂದುಳಿದ ತಾಲೂಕು ಕೋಟೆ ಕ್ಷೇತ್ರದ ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಯೊಂದಿಗೆ ಕ್ಷೇತ್ರದ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಸಂಸದರು, ಶಾಸಕರು ಕೆಲಸ ಮಾಡಬೇಕು. ಇಲ್ಲಿನ ಹತ್ತು-ಹಲವು ಸಮಸ್ಯೆಗಳನ್ನು ಚರ್ಚಿಸಿ, ಬಗೆಹರಿಸಲು ತಹಶೀಲ್ದಾರ್ ಅವರಿಗೆ ಹೇಳಿದ್ದೇನೆ ಎಂದರು.
ಸನ್ಮಾನ ಸ್ವೀಕರಿಸಿದ ಸಂಸದ ಸುನೀಲ್ ಬೋಸ್ ಮಾತನಾಡಿ, ಮೌಢ್ಯ ಬಿಟ್ಟು ಶಾಲೆಗಳತ್ತ ಮುಖಮಾಡಿ. ಎಲ್ಲರಲ್ಲೂ ಪ್ರತಿಭೆ ಇರುತ್ತೆ. ಅದನ್ನು ಹೊರತರಬೇಕಷ್ಟೆ. ಪೋಷಕರು ಮಕ್ಕಳ ಪ್ರತಿಭೆ ಗುರುತಿಸುವ ಕೆಲಕ್ಕೆ ಹೋಗುವುದಿಲ್ಲ. ಒತ್ತಡಕ್ಕೆ ಮಣಿದು ಕಲಿಕೆ ಮಾಡಬೇಡಿ. ಆಸಕ್ತಿಗೆ ಅನುಗುಣವಾಗಿ ಕಲಿಕೆ ಆರಂಭಿಸಿ ಎಂದು ಕಿವಿಮಾತು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ವಿಶ್ವಜ್ಞಾನಿ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಮಹತ್ವ ಸ್ಥಾನ ನೀಡಿದ್ದರು. ಶಿಕ್ಷಣ, ಸಂಘಟನೆ, ಹೋರಾಟ ಮಾಡಬೇಕು ಎಂಬುದನ್ನು ಕಲಿಸಿಕೊಟ್ಟವರು. ಇಂಥವರು ಹೆಸರಿನಲ್ಲಿ ತಾಲೂಕು ಮಟ್ಟದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ೨೭ ಗುಂಟೆ ನಿವೇಶನ ಗುರುತಿಸಲಾಗಿದ್ದು, ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಿದರು.
ಮೈಸೂರಿನ ಗಾಂಧಿ ನಗರದ ಊರಿಲಿಂಗ ಪೆದ್ಮಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಂತರಸಂತೆ ಸಾರನಾಧ ಬುದ್ಧ ವಿಹಾರದ ಮಾತೆ ಬಿಕ್ಕುಣಿ ಗೌತಮಿ ಬಂತೇಜಿ ಬುದ್ದ ವಂದನೆ ಮಾಡಿದರು. ಸರಗೂರು ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಶಿವಣ್ಣ ಮತ್ತು ಎಚ್. ಡಿ.ಕೋಟೆ ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ರುಕಿಯಾ ಬೇಗಂ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಚೆನ್ನೀಪುರ ಮಲ್ಲೇಶ್, ಬನ್ನವಾಡಿ ರಮೇಶ್, ಚಿಕ್ಕವೀರನಾಯಕ ಭಾಗ್ಯ ಲಕ್ಷ್ಮೀ, ಗೋಪಾಲಸ್ವಾಮಿ, ಬಿ.ಸಿ.ಬಸಪ್ಪ, ಗ್ರಾಮೀಣ ಮಹೇಶ್, ಕಂದೇಗಾಲ ಶಿವರಾಜು, ಶಿವಶಂಕರ್, ದೇವಲಾಪುರ ಸಿದ್ದರಾಜು, ಚಲುವಕೃಷ್ಣ, ಬಿಲ್ಲೇಶ್, ಕಂದೇಗಾಲ ನಾಗರಾಜು, ಬಿಡುಗಲು ಶಿವಣ್ಣ, ಉಯ್ಯಂಬಳ್ಳಿ ನಾಗರಾಜು, ಲಂಕೆ ಶ್ರೀನಿವಾಸ್, ರಮೇಶ್, ಲಕ್ಷ್ಮಣ್, ಮಹೇಶ್, ಡಾ.ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಸಣ್ಣಸ್ವಾಮಿ, ಉಪಾಧ್ಯಕ್ಷ ಹನುಂಮತಯ್ಯ, ಪ್ರಧಾನ ಕಾರ್ಯದರ್ಶಿ ಚಿಕ್ಕಸ್ವಾಮಿ, ಗೋಪಾಲ್, ಖಜಂಚಿ ಕಾರಯ್ಯ, ಯಜಮಾನರು ಬೋಗಯ್ಯ ರಂಗಯ್ಯ, ಭೀಮಯ್ಯ ಇದಿಯಪ್ಪ, ಸುಬ್ರಮಣ್ಯ, ಹನುಮಂತಯ್ಯ, ಅದಿಕರ್ನಾಟಕ ಮಹಾಸಭಾ ಮಾಜಿ ಅಧ್ಯಕ್ಷರು ಪುಟ್ಟಯ್ಯ, ಸೋಗಹಳ್ಳಿ ಶಿವಣ್ಣ,ಮುದ್ದಮಲ್ಲಯ್ಯ, ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಉಪಪ್ರಧಾನ ಸಂಚಾಲಕ ದೊಡ್ಡಸಿದ್ದು,ಇಟ್ನ ರಾಜಣ್ಣ, ಹೆಗ್ಗನೂರು ನಿಂಗರಾಜು, ಎಂ.ಡಿ.ಮಂಚಯ್ಯ, ತಿಮ್ಮಯ್ಯ, ದಸಂಸ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ನಾಗೇಂದ್ರ,ಮಣಿಕಂಠ, ಚಂದ್ರಶೇಖರ್ ಮೂರ್ತಿ, ಬಸವರಾಜು, ಶ್ರೀನಿವಾಸ,ಮರಿದೇವಯ್ಯ, ಶಿವಣ್ಣ ಬಿಡಗಲು,ಚಿನ್ನಯ್ಯ, ಸೋಮಣ್ಣ, ನಾಗರಾಜು, ಸಣ್ಣ ಸ್ವಾಮಿ,ನಾಗರಾಜು ಹುಣಸಹಳ್ಳಿ, ಪುಟ್ಟಸ್ವಾಮಿ, ಮಹೇಶ್,ಹೈರಿಗೆ ಶಿವರಾಜು, ನಾಗರಾಜು ಕಂದೇಕಾಲ, ನಂಜಯ್ಯ, ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296