ತುಮಕೂರು: ಮಳೆಯಿಂದ ಮರ ಬಿದ್ದು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಒಂದು ಮಾನವ ಜೀವ ಹಾನಿಯಾಗಿದ್ದು, ಮೃತರ ವಾರಸುದಾರರಿಗೆ 5 ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2024ರ ಜನವರಿ 1 ರಿಂದ ಈವರೆಗೂ ವಾಸ್ತವವಾಗಿ 926 ಮಿ.ಮೀ. ಮಳೆಯಾಗಿದೆ. ಸಿಡಿಲಿನಿಂದ ಶಿರಾ ಹಾಗೂ ತುರುವೇಕೆರೆ ತಾಲ್ಲೂಕಿನ 2 ಹಸು/ಎಮ್ಮೆ ಹಾಗೂ ಪಾವಗಡ ತಾಲ್ಲೂಕಿನ 6 ಕುರಿ ಮತ್ತು ತುರುವೇಕೆರೆ ತಾಲ್ಲೂಕಿನ 17(13 ಮೇಕೆ + 4 ಕುರಿ) ಸೇರಿ ಒಟ್ಟು 25 ಜಾನುವಾರುಗಳ ಪ್ರಾಣ ಹಾನಿಯಾಗಿದೆ. ಈ ಪೈಕಿ ಜಾನುವಾರು ಮಾಲೀಕರಿಗೆ 37,500 ರೂ.(ತಲಾ ಒಂದು ಜಾನುವಾರಿಗೆ)ಗಳ ಪರಿಹಾರ ಹಾಗೂ 4000 ರೂ.ಗಳ (ತಲಾ ಒಂದು ಕುರಿ/ಮೇಕೆ) ಪರಿಹಾರವನ್ನು ವಿತರಿಸಲಾಗಿದೆ.
ಮಳೆಯಿಂದ ಜಿಲ್ಲೆಯ ಒಟ್ಟು 59.52 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಹಾನಿಗೊಳಗಾದ ಬೆಳೆ ಪರಿಹಾರ ನೀಡಲು ಅಗತ್ಯ ಕ್ರಮವಹಿಸಲಾಗಿದೆ. ಅಲ್ಲದೆ 133 ಮನೆ ಹಾನಿ, 3 ಸಂಪೂರ್ಣ/ತೀವ್ರ ಮನೆ ಹಾನಿ ಹಾಗೂ 130 ಭಾಗಶಃ ಮನೆಗಳು ಹಾನಿಯಾಗಿವೆ.
ಮಳೆಯಿಂದ ಹಾನಿಗೊಳಗಾದ 91 ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದ್ದು, ಬೆಳೆ ಹಾನಿ, ಜನ-ಜಾನುವಾರುಗಳ ಪ್ರಾಣ ಹಾನಿ, ಮನೆ ಕಳೆದುಕೊಂಡವರು ನೆರವಿಗಾಗಿ ಜಿಲ್ಲಾ ಮಟ್ಟದ 24*7 ಸಹಾಯವಾಣಿ: 0816-2213400, 0816-155304, 7304975519ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296