nammatumakuru

    Subscribe to Updates

    Get the latest creative news from FooBar about art, design and business.

    What's Hot

    CEC ಜ್ಞಾನೇಶ್ ಕುಮಾರ್‌ರನ್ನು ತಕ್ಷಣ ವಜಾಗೊಳಿಸಿ, ಕ್ರಿಮಿನಲ್ ಕೇಸ್ ದಾಖಲಿಸಿ: ರಾಷ್ಟ್ರಪತಿಗೆ ಸಿದ್ದರಾಮಯ್ಯ ಆಗ್ರಹ

    September 26, 2026

    ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಆರೋಪ: ಬಿಜೆಪಿ ಶಾಸಕ ಮುನಿರತ್ನಗೆ ಯುವಕನಿಂದ ತರಾಟೆ!

    September 26, 2026

    ವಿರಾಜಪೇಟೆ ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್: ಐವರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ; ತಪ್ಪಿದ ದೊಡ್ಡ ಅನಾಹುತ!

    September 26, 2026
    Facebook Twitter Instagram
    ಟ್ರೆಂಡಿಂಗ್
    • CEC ಜ್ಞಾನೇಶ್ ಕುಮಾರ್‌ರನ್ನು ತಕ್ಷಣ ವಜಾಗೊಳಿಸಿ, ಕ್ರಿಮಿನಲ್ ಕೇಸ್ ದಾಖಲಿಸಿ: ರಾಷ್ಟ್ರಪತಿಗೆ ಸಿದ್ದರಾಮಯ್ಯ ಆಗ್ರಹ
    • ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಆರೋಪ: ಬಿಜೆಪಿ ಶಾಸಕ ಮುನಿರತ್ನಗೆ ಯುವಕನಿಂದ ತರಾಟೆ!
    • ವಿರಾಜಪೇಟೆ ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್: ಐವರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ; ತಪ್ಪಿದ ದೊಡ್ಡ ಅನಾಹುತ!
    • ಕಚೇರಿಗೆ ತಡವಾಗಿ ಬಂದ ಅಧಿಕಾರಿಗಳಿಗೆ ಗೇಟ್ ಬಂದ್: ಜಿಪಂ ಸಿಇಒ ದಿಢೀರ್ ಭೇಟಿ, ಒಂದು ದಿನದ ಸಂಬಳ ಕಟ್ ಎಚ್ಚರಿಕೆ!
    • ಕೊರಟಗೆರೆ: ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಒತ್ತು– ಸರ್ವಜನ ಶ್ರಮಜೀವಿ ಸೇವಾ ಟ್ರಸ್ಟ್ ಉದ್ಘಾಟನೆ
    • ಮಾವತ್ತೂರು ಸೊಸೈಟಿ ಸರ್ವ ಸದಸ್ಯರ ಸಭೆ ರಣರಂಗ: ಕಾರ್ಯದರ್ಶಿ ವಿರುದ್ಧ ಗಂಭೀರ ಆರೋಪ, ಅರ್ಧದಲ್ಲೇ ಸಭೆ ಮುಂದೂಡಿಕೆ!
    • ದಸರಾ ಕ್ರೀಡಾಕೂಟ: ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್‌ ನಲ್ಲಿ ಪಾವಗಡದ ಚನ್ನಕೇಶವಪುರ ತಂಡಕ್ಕೆ ದ್ವಿತೀಯ ಸ್ಥಾನ
    • ಬುಡುಬುಡಿ ವೇಷಧಾರಿ ಕಳ್ಳರ ಬಂಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಾಲ್ಮೀಕಿ ನಾಯಕ ಸಮುದಾಯದ ಮೀಸಲಾತಿ 7.5%ಕ್ಕೆ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ
    ತಿಪಟೂರು May 20, 2022

    ವಾಲ್ಮೀಕಿ ನಾಯಕ ಸಮುದಾಯದ ಮೀಸಲಾತಿ 7.5%ಕ್ಕೆ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ

    By adminMay 20, 2022No Comments2 Mins Read

    ತಿಪಟೂರು:  ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮೀಸಲಾತಿ ಹೆಚ್ಚಳ ಮಾಡಬೇಕು ಸಂವಿಧಾನ ಬದ್ದವಾಗಿ ದೊರೆಯಬೇಕಾದ ಮೀಸಲಾತಿಯನ್ನ ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ತಿಪಟೂರಿನಲ್ಲಿ ಮಹಶ್ರೀವಾಲ್ಮೀಕಿ ಸಂಘ ಹಾಗೂ ಮದಕರಿ ನಾಯಕ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

    ನಗರದ ನಗರಸಭಾ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಿ.ಹೆಚ್.ರಸ್ತೆ ಮೂಲಕ ಸಾಗಿ ತಿಪಟೂರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು

    ಪತ್ರಿಭಟನಾಕಾರರನ್ನುದ್ದೇಶಿಸಿ  ಮಾತನಾಡಿದ ಮದಕರಿ ನಾಯಕ ಸಂಘದ ಅಧ್ಯಕ್ಷ ಮಹೇಶ್,  ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮುದಾಯ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಾಮಾಜಿಕವಾಗಿ ಹಿಂದುಳಿದಿದ್ದು ಪರಿಶಿಷ್ಠ ಪಂಗಡಗಳಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ವಾಲ್ಮೀಕಿನಾಯಕ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ 3% ಮೀಸಲಾತಿಯನ್ನು 7.5%ಕ್ಕೆ ಹೆಚ್ಚಳ ಮಾಡಬೇಕು ಹಾಗೂ ಪರಿಶಿಷ್ಟ ಜಾತಿ ಮೀಸಲಾಯಿಯನ್ನ ಶೇಕಡ 15ರಿಂದ 17ಕ್ಕೆ ಹೆಚ್ಚಿಸಬೇಕು  ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಯಥವತ್ ಜಾರಿಗೊಳಿಸಬೇಕು   ಎಂದು ಒತ್ತಾಯಿಸಿದರು.

    ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮೀಸಲು ಹಣ ಕಾಯ್ದೆ 2017 ಕಲಂ 7ಡಿ ಯನ್ನು ಕೂಡಲೇ ರದ್ದುಗೊಳಿಸಬೇಕು.  ಪರಿಶಿಷ್ಠ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ವಾಲ್ಮಿಕಿ ಗುರುಪೀಠದ ಪೂಜ್ಯರಾದ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ಅನಿರ್ಥಿಷ್ಟಾವಧಿ ಮುಷ್ಕರ ಆರಂಭಿಸಿದ್ದು  ಸರ್ಕಾರ ಆರಂಭದಲ್ಲಿ ಬೇಷರತ್ ಆಗಿ ಮೀಸಲಾಯಿ ಹೆಚ್ಚಿಸುವ ಭರವಸೆ ನೀಡಿತ್ತು ಆದರೆ  ಕೊಟ್ಟ ಮಾತನ್ನು ತಪ್ಪುವ ಮೂಲಕ ವಚನ ಭ್ರಷ್ಠವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಸರ್ಕಾರ ನಾಯಕ ಸಮುದಾಯದ ಶಕ್ತಿಯನ್ನ ಲಘುವಾಗಿ ಪರಿಗಣಿಸಿದರೆ ದಂಗೆಳುವ ಸಂದರ್ಭ ಬರುತ್ತದೆ. ಯಾವುದೇ ಕಾರಣಕ್ಕೂ ನಮ್ಮ ಸಮುದಾಯಕ್ಕೆ ಅನ್ಯಾಯವಾದರೇ ಯಾವ ತ್ಯಾಗಕ್ಕೂ ಇಂಜರಿಯುವುದ್ದಿಲ್ಲ. ಸರ್ಕಾರ ಕೂಡಲೇ ಕೊಟ್ಟ ಮಾತಿನಂತೆ ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು

    ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಜಯಸಿಂಹ ಮಾತನಾಡಿ,  ನಾಯಕ ಸಮುದಾಯ ಸ್ವಾಮಿ ನಿಷ್ಟೆ ಹೆಸರಾದ ಸಮುದಾಯವಾಗಿದ್ದು, ತಲತಲಾಂತರದಿಂದ ದೇಶಸೇವೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದರು. ಒಂದು ಕಾಲದಲ್ಲಿ ಆಳುವ ಸಮುದಾಯವಾಗಿದ್ದ ವಾಲ್ಮೀಕಿ ನಾಯಕ ಸಮುದಾಯ. ಇಂದು ಸಾಮಾಜಿಕ ಆರ್ಥಿಕ ರಾಜಕೀಯವಾಗಿ   ತೀರಾ ಹಿಂದುಳಿದಿದ್ದು,  ಅನೇಕ ಜ್ವಲಂತ ಸಮಸ್ಯೆಗಳನ್ನ ಎದುರಿಸುತ್ತಿದೆ. ಕೇಂದ್ರ ಸರ್ಕಾರ ಶೇಕಡ  7.5ರಷ್ಟು ಮೀಸಲಾತಿ ಹೆಚ್ಚಳ ಮಾಡದೆ ಮೀನಾಮೇಷ ಎಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯ ಸರ್ಕಾರ ಪರಿಶಿಷ್ಠ ಪಂಗಡದ ಮೀಸಲಾತಿ ಹೆಚ್ವಿಸುವುದಾಗಿ ಮಾತುಕೊಟ್ಟು ಮಾತು ಮರೆತಿದೆ  ಸರ್ಕರ ಕೊಟ್ಟಮಾತಿನಂತೆ ಮೀಸಲಾತಿ ಹೆಚ್ಚಿಸಬೇಕು  ಸರ್ಕಾರ ಮೀಸಲಾತಿ ಹೆಚ್ಚಿಸದಿದ್ದರೇ ಉಗ್ರಹೋರಾಟ ಮಾಡಲಾಗುವುದು ಎಂದು  ತಿಳಿಸಿದರು.

    ದಲಿತ ಮುಖಂಡ ಕೊಪ್ಪಶಾಂತಪ್ಪ ಮಾತನಾಡಿ, ರಾಜ್ಯ ಪರಿಶಿಷ್ಟ ಜಾತಿ ವರ್ಗಗಳನ್ನ ನಿರ್ಲಕ್ಷ್ಯ ಮಾಡಿವೇ ಪರಿಶಿಷ್ಟ ಜಾತಿಗೆ ಶೇಖಡ17.5 ಹಾಗೂ ಪರಿಶಿಷ್ಠ ವರ್ಗಕ್ಕೆ 7.5 ಮೀಸಲಾತಿ ಮೀಸಲಾತಿ ನೀಡಬೇಕು. ಸರ್ಕಾರ ಪರಿಶಿಷ್ಟರಿಗೆ ನೀಡುವ ಅನುದಾನವನ್ನು ಕಡಿತಗೊಳಿಸುವ ಮೂಲಕ  ಅನ್ಯಾಯವೆಸಗುತ್ತಿದೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆಯಲ್ಲಿ ವಾಲ್ಮೀಕಿ ನಾಯಕ ಸಂಘದ ಉಪಾಧ್ಯಕ್ಷ ನಾಗರಾಜು, ಪ್ರಧಾನಕಾರ್ಯದರ್ಶಿ ಮಂಜುನಾಥ್, ನಾರಾಯಣಪ್ಪ, ಸುಧಾಕರ್ ಗೋವಿಂದಪ್ಪ, ನಾಗಣ್ಣ ಮದಕರಿ ನಾಯಕ ಸಂಘದ ಉಪಾಧ್ಯಕ್ಷ ಲಿಂಗರಾಜು, ಮಂಜುನಾಥ್, ಗೌರಾವಧ್ಯಕ್ಷ  ಸಿದ್ದಯ್ಯ, ಪರುಶುರಾಮ್ ನಾಯಕ್, ಪ್ರಧಾನಕಾರ್ಯದರ್ಶಿ ಮಹಲಿಂಗಯ್ಯ, ಸಿದ್ದೇಶ್ ಖಜಾಂಚಿ,  ಕೃಷ್ಣಮೂರ್ತಿ,  ವಿನಯ್,  ಶ್ರೀನಿವಾಸ್ , ರಾಜುಮದಕರಿ, ಸೀತಾನಾಯಕ್ ಮುಂತಾದವರು ಉಪಸ್ಥಿತರಿದರು.

    ವರದಿ: ಆನಂದ, ತಿಪಟೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ತಿಪಟೂರಿನ ಶ್ರೀ ಬಸವೇಶ್ವರ ಕಾಲೇಜಿನಲ್ಲಿ ಅರ್ಥಪೂರ್ಣ ‘ವಿಶ್ವ ಫಾರ್ಮಸಿಸ್ಟ್ ದಿನಾಚರಣೆ — 2026’

    September 26, 2026

    ಬೋಧಕ ವರ್ಗ ಹಾಗೂ ಗ್ರಂಥಾಲಯದ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಿ: ಡಾ. ಶಶಿಕುಮಾರ್ ಎಚ್.ಸಿ.

    September 20, 2026

    ತಿಪಟೂರಿನಲ್ಲಿ ಹೋಟೆಲ್ ಹಾಗೂ ಡಾಬಾಗಳ ಮೇಲೆ ಜಂಟಿ ದಾಳಿ: ಕಳಪೆ ಆಹಾರ ಪದಾರ್ಥಗಳು ವಶ

    September 12, 2026

    Leave A Reply Cancel Reply

    Our Picks

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    CEC ಜ್ಞಾನೇಶ್ ಕುಮಾರ್‌ರನ್ನು ತಕ್ಷಣ ವಜಾಗೊಳಿಸಿ, ಕ್ರಿಮಿನಲ್ ಕೇಸ್ ದಾಖಲಿಸಿ: ರಾಷ್ಟ್ರಪತಿಗೆ ಸಿದ್ದರಾಮಯ್ಯ ಆಗ್ರಹ

    September 26, 2026

    ಬೆಂಗಳೂರು: ಭಾರತೀಯ ಚುನಾವಣಾ ಆಯೋಗದ (ECI) ಕಾರ್ಯವೈಖರಿ ಮತ್ತು ಸ್ವಾಯತ್ತತೆಯ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,…

    ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಆರೋಪ: ಬಿಜೆಪಿ ಶಾಸಕ ಮುನಿರತ್ನಗೆ ಯುವಕನಿಂದ ತರಾಟೆ!

    September 26, 2026

    ವಿರಾಜಪೇಟೆ ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್: ಐವರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ; ತಪ್ಪಿದ ದೊಡ್ಡ ಅನಾಹುತ!

    September 26, 2026

    ಕಚೇರಿಗೆ ತಡವಾಗಿ ಬಂದ ಅಧಿಕಾರಿಗಳಿಗೆ ಗೇಟ್ ಬಂದ್: ಜಿಪಂ ಸಿಇಒ ದಿಢೀರ್ ಭೇಟಿ, ಒಂದು ದಿನದ ಸಂಬಳ ಕಟ್ ಎಚ್ಚರಿಕೆ!

    September 26, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.