nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!

    April 19, 2026

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026

    ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ

    April 19, 2026
    Facebook Twitter Instagram
    ಟ್ರೆಂಡಿಂಗ್
    • ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!
    • ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ
    • ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ
    • ವಿದ್ಯಾವಂತರಲ್ಲೇ ಹೆಚ್ಚುತ್ತಿರುವ ಜಾತಿ ಪ್ರಜ್ಞೆ: ಲೇಖಕಿ ಎಂ.ಸಿ.ಲಲಿತ ವಿಷಾದ
    • ತಿಪಟೂರು: ಬೆಡ್‌ ಶೀಟ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ; ಪಕ್ಕದ ಪೊರಕೆ ತಯಾರಿಕಾ ಘಟಕಕ್ಕೂ ಬೆಂಕಿ ಕೆನ್ನಾಲಿಗೆ
    • ಅವೈಜ್ಞಾನಿಕ ಅಂಡರ್‌ ಪಾಸ್; ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಜಯಂತಿ ಗ್ರಾಮಸ್ಥರಿಂದ ಧರಣಿ
    • ಸಿಂಗಾಪುರ ಗ್ರಾಮಕ್ಕೆ ಸರ್ಕಾರಿ ಬಸ್‌ ಸೌಲಭ್ಯ ಕಲ್ಪಿಸಲು ಮಹಿಳೆಯರ ಆಗ್ರಹ: ಕೆಎಸ್‌ ಆರ್‌ ಟಿಸಿ ಅಧಿಕಾರಿಗೆ ಮನವಿ
    • ಹುಳಿಯಾರಿನ ವಾರದ ತರಕಾರಿ ಸಂತೆ ಸ್ಥಳಾಂತರ: ಏಪ್ರಿಲ್ 23ರಿಂದ ಹೊಸ ವ್ಯವಸ್ಥೆ ಜಾರಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪ್ರಾಣ ಯಾವ ಧರ್ಮ, ಮತ, ಪಕ್ಷಕ್ಕೆ ಸೀಮಿತವಲ್ಲಾ: ಬರಗೂರು ರಾಮಚಂದ್ರಪ್ಪ
    ಕೊರಟಗೆರೆ August 5, 2022

    ಪ್ರಾಣ ಯಾವ ಧರ್ಮ, ಮತ, ಪಕ್ಷಕ್ಕೆ ಸೀಮಿತವಲ್ಲಾ: ಬರಗೂರು ರಾಮಚಂದ್ರಪ್ಪ

    By adminAugust 5, 2022No Comments2 Mins Read
    baraguru ramachandra

    ಕೊರಟಗೆರೆ: ದೇಶ ಹಾಗೂ ರಾಜ್ಯದ ಯುವಜನತೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳ ಜ್ಞಾನವಿದ್ದಾಗ ಮಾತ್ರ ಮನುಷ್ಯತ್ವ ಗುಣವುಳ್ಳಲು ಸಾಧ್ಯ ಎಂದು ಸಾಹಿತಿ, ಸಂಸ್ಕೃತಿ ಚಿಂತಕರಾದ ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯ ನಂತರ ಮಾತನಾಡಿ, ಮೇಲ್ನೋಟಕ್ಕೆ ನಾವೆಲ್ಲರೂ ಮನುಷ್ಯರೇ, ಆದರೆ ಪ್ರತಿಯೊಬ್ಬ ಯುವಕರಲ್ಲಿ ಒಂದೊಂದು ರೀತಿಯ ಕಲಾವಿದ ಇರುತ್ತಾನೆ. ನಿಜವಾದ ಕಲಾವಿದ ಕಣ್ಣೀರು ಹಾಕುವುದು ಬೇಕಾಗಿಲ್ಲ ಆದರೆ ಅವನ ಅಂತರಾಳದಿಂದ ಕಣ್ಣೀರು ತೆಗೆಯಬೇಕಾಗುತ್ತದೆ. ನಮ್ಮ ದೇಶದಲ್ಲಿ ಇಂದು ಜಾತಿ ಮತ್ತು ಪಂತಗಳ ಪಟ್ಟಿ ಎಣಿಕೆ ಮಾಡಲು ನಾವೆಲ್ಲರೂ ಶುರು ಮಾಡಿದ್ದೇವೆ ಎಂದರು.


    Provided by
    Provided by

    ಪ್ರಾಣ ಯಾವ ಧರ್ಮ, ಮತ, ಪಕ್ಷಕ್ಕೆ ಸೀಮಿತವಲ್ಲಾ. ಯಾವುದೋ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿ ಸತ್ತಾಗ ನಮಗೆ ಕರುಣೆ ಅನ್ನೋದು ಬರಬೇಕಲ್ವಾ ಹಾಗಾದರೆ ಇಂದು ನಾವು ಯಾವ ಕಡೆ ಸಾಗುತ್ತೀದ್ದೇವೆ ಎಂಬುದನ್ನು ಯುವಕರು ಒಮ್ಮೆ ಯೋಚಿಸುವುದು ಬಹುಮುಖ್ಯ ಎಂದು ಹೇಳಿದರು.

    ಸರಿಗಮಪ ಪ್ರಶಸ್ತಿ ವಿಜೇತ ಕಂಬದರಂಗಯ್ಯ ಸಾಂಸ್ಕೃತಿಕ ಸಂಭ್ರಮ ಉದ್ದೇಶಿಸಿ ಮಾತನಾಡಿ, ಬಡತನ, ಛಲ, ಆತ್ಮಸ್ಥೈರ್ಯವೇ ಸರಿಗಮಪದಲ್ಲಿ ವಿಜೇತನಾಗಲು ಸಾಧ್ಯವಾಯಿತು. ಬಾಲ್ಯದಲ್ಲಿ ಹೆಚ್ಚಾಗಿ ವಿದ್ಯಾಭ್ಯಾಸದ ಕಡೆ ಗಮನವಿತ್ತು. ಆದರೆ ಬಡತನ ವಿದ್ಯಾಭ್ಯಾಸವನ್ನು ಮುಂದುವರೆಸಲು ಬಿಡಲಿಲ್ಲ. ತುಮಕೂರಿನ ಆಕೇಸ್ಟ್ರಾ ಒಂದರಲ್ಲಿ 10 ವರ್ಷಗಳವರೆಗೆ ಕೆಲಸ ಮಾಡಿದ್ದೆ. ನಂತರ ಸಂಗೀತ ಸಂಯೋಜಕ ಡಾ.ಹಂಸಲೇಖರವರು ಪ್ರೋತ್ಸಾಹ ನೀಡಿ ಝೀ ಕನ್ನಡ ವಾಹಿನಿಯ ನೇತೃತ್ವದ ಸರಿಗಮಪ ವೇದಿಕೆಯಲ್ಲಿ ಹಾಡಲು ಅವಕಾಶ ಕಲ್ಪಿಸಿ ಕೊಟ್ಟಿದರಿಂದಲೇ ನಿಮ್ಮ ಪ್ರೀತಿ ವಿಶ್ವಾಸವನ್ನು ಗಳಿಸಲು ಸಾಧ್ಯವಾಯಿತು ಎಂದರು.

    ಪ್ರಾಂಶುಪಾಲರಾದ ಡಾ. ಪ್ರಸನ್ನ ಮಾತನಾಡಿ, ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಸರಿಗಮಪ ವಿಜೇತ ಕಂಬದರಂಗಯ್ಯ ಇಬ್ಬರೂ ಸಹ ಅವರದ್ದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ವಿದ್ಯಾರ್ಥಿಗಳು ಅವರ ಜೀವನದ ಪ್ರತಿಯೊಂದು ಉತ್ತಮ ಅಂಶವನ್ನು ಅಳವಡಿಸಿಕೊಳ್ಳಿ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಂಜಿಸುತ್ತಿರುವುದು ನಮ್ಮೆಲ್ಲರಾ ಸೌಭಾಗ್ಯ ಎಂದು ಹೇಳಿದರು.

    ಕಾರ್ಯಕ್ರಮದ ವೇಳೆ ಕಾಲೇಜು ವಿದ್ಯಾರ್ಥಿಗಳು ಕರುನಾಡ ರತ್ನ ಡಾ. ಪುನೀತ್ ರಾಜ್ಕುಮಾರ್ ಭಾವಚಿತ್ರವನ್ನು ಶಾಲಾ ಕಟ್ಟಡದ ಮೇಲೆ ಹಾರಿಸಿ ಎಲ್ಲರೂ ಸಂಭ್ರಮಿಸಿ ಅಪ್ಪು ಹಾಡಿಗೆ ಮೆಲುಕು ಹಾಕಿದರು.

    ಈ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಓ ನಾಗರಾಜು, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಶಿವನಂಜಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಭೋದಕ ಮತ್ತು ಭೋದಕೇತರರು, ವಿದ್ಯಾರ್ಥಿಗಳು ಹಾಜರಿದ್ದರು.

    ವರದಿ: ಮಂಜುಸ್ವಾಮಿ.ಎಂ.ಎನ್. , ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಕೊರಟಗೆರೆ: ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ

    April 13, 2026

    ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ

    April 12, 2026

    ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ

    April 12, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss

    ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!

    April 19, 2026

    ತುಮಕೂರು: ಜಿಲ್ಲೆಯಲ್ಲಿ ಆರಂಭವಾಗಿರುವ ಜನಗಣತಿ (ಮನೆ ಗಣತಿ) ಕಾರ್ಯಕ್ಕೆ ಆರಂಭದಲ್ಲೇ ತಾಂತ್ರಿಕ ವಿಘ್ನ ಎದುರಾಗಿದೆ. ಗಣತಿಗಾಗಿ ಬಳಸಬೇಕಾದ ‘ಹೌಸ್ ಲಿಸ್ಟಿಂಗ್…

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026

    ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ

    April 19, 2026

    ವಿದ್ಯಾವಂತರಲ್ಲೇ ಹೆಚ್ಚುತ್ತಿರುವ ಜಾತಿ ಪ್ರಜ್ಞೆ: ಲೇಖಕಿ ಎಂ.ಸಿ.ಲಲಿತ ವಿಷಾದ

    April 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.