ಹಾಸನ: ಜಿಲ್ಲೆಯ ಚೆನ್ನಾರಾಯಪಟ್ಟಣ ತಾಲ್ಲೂಕಿನ ಜಂಬೂರಿನಲ್ಲಿ ಗಂಗಾಪರಮೇಶ್ವರಿ ವಿಸರ್ಜನೆ ಮಹೋತ್ಸವ ನಡೆಯಿತು.
ಗೌರಿ ಹಬ್ಬದದಂದು ಗಂಗಾಪರಮೇಶ್ವರಿ ಮೀನುಗಾರರ ಸಹಕಾರಿ ಸಂಘ ಹಾಗೂ ಗಂಗಾಮತಸ್ಥ ಸಮಾಜ ಮತ್ತು ಗ್ರಾಮಸ್ಥರು ಪ್ರತಿಷ್ಠಾಪಿಸಿದ್ದ ಶ್ರೀ ಗಂಗಾಪರಮೇಶ್ವರಿ ತಾಯಿಯ ವಿಗ್ರಹವನ್ನು ಜಂಬೂರಿನಲ್ಲಿ ಕೆರೆಗೆ ವಿಸರ್ಜನೆ ಮಾಡಲಾಯಿತು.
ವಿಸರ್ಜನೆಗೆ ಮೊದಲು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬೆಸ್ತ ಜನಾಂಗಂದ ಕುಲದೇವತೆಯಾದ ಗಂಗಾಪರಮೇಶ್ವರಿಯನ್ನು ಗೌರಿ ಹಬ್ಬದದಂದು ಪ್ರತಿಷ್ಠಾಪಿಸಲ್ಪಟ್ಟು ಇಲ್ಲಿ ವಿಶೇಷ ಪೂಜೆ ನಡೆಸುತ್ತಾರೆ.
ಮೊಸಳೆಯನ್ನು ತನ್ನ ರಥವಾಗಿಮಾಡಿಕೊಂಡು ಕುಳಿತ ಸುಂದರ ದೇವತೆ, ಸಕಲ ಜೀವರಾಶಿಗಳಿಗೆ ಜೀವನಾಡಿ ಗಂಗಾಪರಮೇಶ್ವರಿ ಪೂಜೆ ಜೊತೆಗೆ ಮೀನು ಹಿಡಿಯುವ ಬಲೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


