nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

    August 9, 2026
    Facebook Twitter Instagram
    ಟ್ರೆಂಡಿಂಗ್
    • ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!
    • ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ
    • ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!
    • ‘ನೀವು ಭಯೋತ್ಪಾದಕರಾ?’ ಎಂದು ಪ್ರಶ್ನಿಸಿ ಯುವಕರ ಮೇಲೆ ಬೇಸ್‌ ಬಾಲ್ ಬ್ಯಾಟ್‌ ನಿಂದ ಹಲ್ಲೆ; ಎಫ್‌ ಐಆರ್ ದಾಖಲು
    • ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ ನಲ್ಲಿ ಅಸಮಾಧಾನ ಸ್ಫೋಟ: ಬಿಕ್ಕಟ್ಟು ಶಮನಕ್ಕೆ ಹೈಕಮಾಂಡ್‌ ಮೊರೆ ಹೋದ ಸಿಎಂ ಡಿಕೆಶಿ
    • KPSC ಅಕ್ರಮ ಹಾಗೂ ಬಿಡದಿ ಟೌನ್‌ ಶಿಪ್ ವಿವಾದ: ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ BJP–JDS ಸಜ್ಜು
    • ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆಯೇ?: ಪರಿಶೀಲಿಸುವುದು ಹೇಗೆ? ತಪ್ಪದೇ ಈ ಸುದ್ದಿ ಓದಿ
    • 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾಫಿನಾಡಿನ ನೀಲಿ ಕುರುಂಜಿ ಹೂ ಇದೀಗ ಪ್ರವಾಸಿಗರ ಆಕರ್ಷಣೆ; ವಿಶೇಷತೆ ಇಲ್ಲಿದೆ ನೋಡಿ
    ರಾಜ್ಯ ಸುದ್ದಿ October 1, 2022

    ಕಾಫಿನಾಡಿನ ನೀಲಿ ಕುರುಂಜಿ ಹೂ ಇದೀಗ ಪ್ರವಾಸಿಗರ ಆಕರ್ಷಣೆ; ವಿಶೇಷತೆ ಇಲ್ಲಿದೆ ನೋಡಿ

    By adminOctober 1, 2022No Comments3 Mins Read
    kurunjji

    ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಅರಳಿ ನಿಂತಿರುವ ಅಪರೂಪದ ಹೂವೊಂದು ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನು ಇಮ್ಮಡಿಗೊಳಿಸಿದೆ. 12 ವರ್ಷಗಳಿಗೊಮ್ಮೆ ಅರಳುವ ಈ ಹೂವು ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ. ಕಣ್ಣು ಹಾಯಿಸಿದಲೆಲ್ಲಾ ಕಾಣುವ ಅಪರೂಪದ ನೀಲಿ ಕುರುಂಜಿ ನೋಡುಗರ ಕಣ್ಮನ ಸೆಳೆಯುವರ ಜೊತೆಗರ ಪ್ರವಾಸಿಗರನ್ನು ಕೈ ಬೀಸಿ ತನ್ನತ್ತ ಕರೆಯುತ್ತಿದೆ.

    ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಚಿಕ್ಕಮಗಳೂರಿನ ಗಿರಿ-ಪರ್ವತ ಶ್ರೇಣಿಗಳ ಸಾಲು ನೀಲಿ ರೂಪ ಪಡೆದುಕೊಳ್ಳುತ್ತಿವೆ. ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸುತ್ತಿವೆ. ರಸ್ತೆಯ ಪಕ್ಕದಲ್ಲಿ ಅರಳಿ ನಿಂತಿರುವ ಕುರುಂಜಿ ಪ್ರವಾಸಿಗರನ್ನು ಕೈ ಬೀಸಿ ತನ್ನತ್ತ ಕರೆಯುತ್ತಿದೆ. ಪಶ್ಚಿಮ ಘಟ್ಟಗಳ ಪ್ರಕೃತಿಯಲ್ಲಿ ವಿವಿಧ ಬಗೆಯ ನಿಗೂಢಗಳು ಬಹಳಷ್ಟು ಇವೆ. ಅವುಗಳಲ್ಲಿ ಕುರುಂಜಿ ಸಸ್ಯವೂ ಒಂದಾಗಿದೆ. ಸಸ್ಯ ವಿಜ್ಞಾನದಲ್ಲಿ ಕುರುಂಜಿಗೆ ‘ಸ್ಟ್ರೋಬಿಲಾಂಥಿಸ್’ ಎಂಬ ಹೆಸರು ಇದೆ. 70ಕ್ಕೂ ಹೆಚ್ಚು ಪ್ರಬೇಧಗಳು (ಕುಂತಿಯಾನಸ್, ಬಾರ್ಬೇಟಸ್, ಸೆಸಿಲಿಸ್, ಕನ್ಸಾಗ್ವಿನಿಯಸ್) ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತವೆ. 2, 4, 7, 12 ಹಾಗೂ 16 ವರ್ಷಗಳಿಗೊಮ್ಮೆ ಅರಳುವುದು ಈ ಸಸ್ಯ ಪುಷ್ಪಗಳ ವಿಶೇಷ ಎಂದು ತಜ್ಞರು ಹೇಳುತ್ತಾರೆ.

    ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿಯಲ್ಲಿ ಈಗ ನೀಲ ಕುರುಂಜಿ ಪುಷ್ಪಗಳು ಅರಳಿದ್ದು, ಬೆಟ್ಟದ ಬಹುಭಾಗವನ್ನು ಈಗ ನೀಲಿಯಾಗಿ ಪರಿವರ್ತಿಸಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಗಿರಿ ಶ್ರೇಣಿಯಲ್ಲಿ ಅರಳಿರುವ ಹೂವುಗಳನ್ನು ಸ್ಟ್ರೋಬಿಲಾಂಥಸ್ ಸೆಸಿಲಿಸ್ ಎನ್ನುತ್ತಾರೆ. ನೀಲ ಕುರುಂಜಿ ಸಸ್ಯಗಳು 12 ವರ್ಷಗಳಿಗೊಮ್ಮೆ ಹೂ ಬಿಡುತ್ತವೆ. ಈ ಭಾಗದಲ್ಲಿ ಈ ಹೂವಿಗೆ ‘ಹಾರ್ಲೆ’, ‘ಗುರಿಕಿ’ ಅಂತಲೂ ಕರೆಯುತ್ತಾರೆ. ಏಕಕಾಲದಲ್ಲಿ ಬೆಟ್ಟದ ತುಂತಾ ಅರಳುವುದು ಈ ಹೂವಿನ ವಿಶೇಷವಾಗಿದೆ. ಈ ಪುಷ್ಪ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳ ಪ್ರವಾಸಿಗರು ಕಾಫಿನಾಡಿಗೆ ಭೇಟಿ ನೀಡುತ್ತಿದ್ದಾರೆ.

    ದಕ್ಷಿಣ ಭಾರತದ ಅತಿ ಎತ್ತರ ಶಿಖರದ ಮುಳ್ಳಯ್ಯನ ಗಿರಿ ಸಾಲು, ಸೀತಾಳಯ್ಯನ ಗಿರಿ ಪ್ರದೇಶ, ಬಾಬಾಬುಡನ್ ಗಿರಿ ಭಾಗ, ಮಹಲ್ ಕಡೆ ಹೂವುಗಳು ಅರಳಿವೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ನಾಡಿನ ಈ ಉತ್ತುಂಗ ಶಿಖರ ಚಿಕ್ಕಮಗಳೂರಿನಿಂದ 26 ಕಿಲೋ ಮೀಟರ್‌ ದೂರದಲ್ಲಿ ಇದೆ. ಈ ಕಳೆದ ವರ್ಷವೂ ಗಿರಿಶ್ರೇಣಿಯ ಕೆಲವೆಡೆ ಹೂವು ಅರಳಿತ್ತು. ಮೂಡಿಗೆರೆ ತಾಲೂಕಿನ ದೇವರುಂದ ಭಾಗದಲ್ಲೂ ಅರಳಿದ್ದವು. ನೀಲಿ ಕುರಂಜಿ ಪುಷ್ಪ ಲೋಕ ಅರಳಿದೆ, ನನ್ನ ನೋಡಲು ಬರುವಿರೇನು ಎಂದು ಕರೆಯುತ್ತಿರುವಂತಿದೆ.

    ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯ ಸಾಲಿನಲ್ಲಿ ಮಾತ್ರ ಅರಳುವ ಈ ಹೂವು, ಇದೀದ ಕಾಫಿನಾಡಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಅರಳಿ ನಿಂತಿದೆ. ಮುಳ್ಳಯ್ಯನಗಿರಿ, ಮಲ್ಲಂದೂರಿನ ಕಲ್ಲುಬಂಡೆಗುಡ್ಡ ಸುತ್ತಲೂ ಹುಲುಸಾಗಿ ಅರಳಿ ನಿಂತಿದೆ. ಪಶ್ವಿಮಘಟ್ಟ ಸಂರಕ್ಷಿತ ಪ್ರದೇಶ ಆಗಿರುವುದರಿಂದ ಈ ಹೂವು ಇನ್ನೂ ಜೀವಂತವಾಗಿದ್ದು, ಪ್ರತಿ 12 ವರ್ಷಕೊಮ್ಮೆ ಕಾಫಿನಾಡನ್ನು ಭೂ ಲೋಕದ ಸ್ವರ್ಗವನ್ನನ್ನಾಗಿಸುತ್ತದೆ.

    ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವೆಳ್ಳಿನ ಮದುವೆ ಆಗುವಾಗ ಈ ಹೂವಿನ ಮಾಲೆ ಹಾಕಿದ್ದರಿಂದ ಈ ಗುರ್ಗಿಯನ್ನ ಪ್ರೇಮದ ಸಂಕೇತವಾಗಿ ಕೇರಳ, ತಮಿಳುನಾಡಿಗರು ಪ್ರೇಮದ ಹೂ ಅಂತಲೂ ಕರೆಯುತ್ತಾರೆ. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನ ಆಗಿದ್ದಾಗ ಮಾತ್ರ ಹೂ ಅರಳಲಿದೆ. ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳಿದ್ದು, ಇದನ್ನು ವಿವಿಧ ಖಾಯಿಲೆಗಳು ಗುಣ ಆಗಲು ಬಳಸುತ್ತಾರೆ.

    ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವೆಳ್ಳಿನ ಮದುವೆ ಆಗುವಾಗ ಈ ಹೂವಿನ ಮಾಲೆ ಹಾಕಿದ್ದರಿಂದ ಈ ಗುರ್ಗಿಯನ್ನ ಪ್ರೇಮದ ಸಂಕೇತವಾಗಿ ಕೇರಳ, ತಮಿಳುನಾಡಿಗರು ಪ್ರೇಮದ ಹೂ ಅಂತಲೂ ಕರೆಯುತ್ತಾರೆ. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನ ಆಗಿದ್ದಾಗ ಮಾತ್ರ ಹೂ ಅರಳಲಿದೆ. ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳಿದ್ದು, ಇದನ್ನು ವಿವಿಧ ಖಾಯಿಲೆಗಳು ಗುಣ ಆಗಲು ಬಳಸುತ್ತಾರೆ.

    ಒಟ್ಟಾರೆ ಕಾಫಿನಾಡಿನಲ್ಲಿ ಒಂದೊಂದು ಕಾಲದಲ್ಲೂ ಒಂದೊಂದು ರೀತಿಯ ಸೌಂದರ್ಯ ಮನೆ ಮಾಡಿರುತ್ತದೆ. ಈವರೆಗೆ ಹಸಿರಿನಿಂದ ಕಂಗೊಳಿಸುವ ಬೆಟ್ಟಗುಡ್ಡಗಳನ್ನು ನೋಡಿದ್ದ ನಾವು-ನೀವು, ಇನ್ಮುಂದೆ ನೀಲಿ ಬೆಟ್ಟಗಳನ್ನು ನೋಡಬೇಕು ಅಂದರೆ ಕಾಫಿನಾಡಿಗೆ ಬರಲೇಬೇಕು. ತಿಂಗಳ ಕಾಲ ಅರಳಿ ನಿಲ್ಲುವ ಇಲ್ಲಿನ ಸೌಂದರ್ಯಕ್ಕೆ ಸರಿಸಾಟಿ ಮತ್ತೊಂದಿಲ್ಲ ಅನ್ನುವುದಂತೂ ಸತ್ಯವಾಗಿದೆ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

    August 9, 2026

    ‘ನೀವು ಭಯೋತ್ಪಾದಕರಾ?’ ಎಂದು ಪ್ರಶ್ನಿಸಿ ಯುವಕರ ಮೇಲೆ ಬೇಸ್‌ ಬಾಲ್ ಬ್ಯಾಟ್‌ ನಿಂದ ಹಲ್ಲೆ; ಎಫ್‌ ಐಆರ್ ದಾಖಲು

    August 9, 2026

    ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ ನಲ್ಲಿ ಅಸಮಾಧಾನ ಸ್ಫೋಟ: ಬಿಕ್ಕಟ್ಟು ಶಮನಕ್ಕೆ ಹೈಕಮಾಂಡ್‌ ಮೊರೆ ಹೋದ ಸಿಎಂ ಡಿಕೆಶಿ

    August 9, 2026

    Comments are closed.

    Our Picks

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಲಖನೌ: ನಕಲಿ ಗುರುತಿನ ಚೀಟಿಗಳನ್ನು (Fake IDs) ಬಳಸಿ ಸುಮಾರು 25ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಕೋಟ್ಯಂತರ ರೂಪಾಯಿ ವಂಚಿಸಿರುವ…

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    ವಾಲ್ಮೀಕಿ ನಿಗಮ ಹಗರಣ: ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ; ಸಚಿವ ಬಿ. ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ!

    August 9, 2026

    ‘ನೀವು ಭಯೋತ್ಪಾದಕರಾ?’ ಎಂದು ಪ್ರಶ್ನಿಸಿ ಯುವಕರ ಮೇಲೆ ಬೇಸ್‌ ಬಾಲ್ ಬ್ಯಾಟ್‌ ನಿಂದ ಹಲ್ಲೆ; ಎಫ್‌ ಐಆರ್ ದಾಖಲು

    August 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.