ರಾಮಮಂದಿರ ಬ್ಲಾಸ್ ಮಾಡುವ ಪಿಎಫ್ ಐ ಸಂಚು ಬೆಳಕಿಗೆ ಬಂದಿದೆ. ಮುಸ್ಲಿಮರು ರಾಮಮಂದಿರ ಧ್ವಂಸ ಮಾಡುವ ಕನಸು ಕಾಣಬೇಡಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ಧಾರೆ.
ಮಹಾರಾಷ್ಟ್ರದಲ್ಲಿ ಪಿಎಫ್ ಐ ಕಾರ್ಯಕರ್ತ ಸೇರಿ ನಾಲ್ವರ ಬಂಧನ ಕುರಿತು ಹಾವೇರಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ರಾಮಮಂದಿರ ಬ್ಲಾಸ್ಟ್ ಮಾಡುವ ಪಿಎಫ್ ಐ ಸಂಚು ಬಯಲಾಗಿದೆ. ಎಟಿಎಸ್ ನವರು ಬಂಧಿಸಿದ ಬಳಿಕ ಈ ಮಾಹಿತಿ ಬಾಯ್ಬಿಟ್ಟಿದ್ದಾರೆ. ಇವರಿಗೆ ಎಷ್ಟು ಸೊಕ್ಕು ದುರಂಹಕಾರಿಗಳು. ದೇಗುಲ ಒಡೆದು ಬಾಬ್ರಿ ಮಸೀದಿ ಕಟ್ಟಿದ್ದಾನೆಂದು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿ ಮಂದಿರ ಕೆಡವಲು ಸಂಚು ರೂಪಿಸಿದ್ದಾರೆ. ಮುಸ್ಲೀಮರು ರಾಮಮಂದಿರ ಧ್ವಂಸ ಮಾಡುವ ಕನಸು ಕಾಣಬೇಡಿ ಹಿಂದೂ ಸಮಾಜ ಜಾಗೃತವಾಗಿದೆ ಕಾನೂನು ಇದೆ. ಸಂವಿಧಾನ ಇದೆ ಎಂದರು.
ಪಿಎಫ್ ಐ ಭ್ಯಾನ್ ಮಾಡಿದ್ಧ ನಡೆ ಸರಿಯಾಗಿಯೇ ಇದೆ. ಪಿಎಫ್ ಐ ಕನಸು ಭಗ್ನ ಮಾಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.
ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಶುರು ಮಾಡಿದ್ದೇವೆ. ಈಗ ಎಲ್ಲಾ ಪದಾರ್ಥಗಳಲ್ಲೂ ಹಲಾಲ್ ಸರ್ಟಿಫಿಕೇಟ್ ಇದೆ. ಈ ಹಣ ಭಯೋತ್ಪಾಧಕರಿಗೆ ಹೋಗುತ್ತೆ. ಮುಸ್ಲಿಮರ ಜೊತೆ ಯಾವುದೇ ವ್ಯಾಪಾರ ವ್ಯವಹಾರ ಮಾಡಬಾರದು ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


