nammatumakuru

    Subscribe to Updates

    Get the latest creative news from FooBar about art, design and business.

    What's Hot

    ರೇಷ್ಮೆ ಸೀರೆಗೆ ಎಣ್ಣೆ, ಮೇಣದ ಕಲೆ ಬಿದ್ದರೆ ಚಿಂತೆ ಬೇಡ; ಈ ಟಿಪ್ಸ್ ಅನುಸರಿಸಿ

    November 4, 2026

    ನಾಯಿಗಳಲ್ಲ, ರೋಬೋಟ್‌ ಗಳಿಗೆ ವಾಕಿಂಗ್ ಮಾಡಿಸಿದರೆ ದುಡ್ಡು! AI ತಂತ್ರಜ್ಞಾನಕ್ಕೆ ಹೊಸ ಪ್ರಯೋಗ

    November 4, 2026

    ವಿಮಾನದಲ್ಲೂ ಇರುತ್ತಾ ಹಾರ್ನ್? ಆಕಾಶದಲ್ಲಿ ಯಾರಿಗೆ ಹಾರ್ನ್? | ಈ ಅಚ್ಚರಿಯ ಸಂಗತಿ ನಿಮಗೆ ಗೊತ್ತಾ?

    November 4, 2026
    Facebook Twitter Instagram
    ಟ್ರೆಂಡಿಂಗ್
    • ರೇಷ್ಮೆ ಸೀರೆಗೆ ಎಣ್ಣೆ, ಮೇಣದ ಕಲೆ ಬಿದ್ದರೆ ಚಿಂತೆ ಬೇಡ; ಈ ಟಿಪ್ಸ್ ಅನುಸರಿಸಿ
    • ನಾಯಿಗಳಲ್ಲ, ರೋಬೋಟ್‌ ಗಳಿಗೆ ವಾಕಿಂಗ್ ಮಾಡಿಸಿದರೆ ದುಡ್ಡು! AI ತಂತ್ರಜ್ಞಾನಕ್ಕೆ ಹೊಸ ಪ್ರಯೋಗ
    • ವಿಮಾನದಲ್ಲೂ ಇರುತ್ತಾ ಹಾರ್ನ್? ಆಕಾಶದಲ್ಲಿ ಯಾರಿಗೆ ಹಾರ್ನ್? | ಈ ಅಚ್ಚರಿಯ ಸಂಗತಿ ನಿಮಗೆ ಗೊತ್ತಾ?
    • ಫ್ರಿಜ್‌ ನಿಂದ ತೆಗೆದ ತಕ್ಷಣ ಮೊಸರು ತಿನ್ನುತ್ತೀರಾ? ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ?
    • ನ.7ರಂದು ಹೊಳವನಹಳ್ಳಿ ಹೋಬಳಿಯಲ್ಲಿ ಪ್ರಜಾಸೇವೆ ಆಂದೋಲನ ಸಭೆ
    • ತಿಪಟೂರು ರೋಟರಿ ಕ್ಲಬ್‌ ನಿಂದ ಅದ್ದೂರಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ
    • ಔರಾದ್ ಬ್ಲಾಕ್ ಕಾಂಗ್ರೆಸ್ ಪ.ಜಾ. ವಿಭಾಗದ ಕಾರ್ಯದರ್ಶಿಯಾಗಿ ಗೌತಮ್ ಮೇತ್ರೆ ನೇಮಕ
    • ಭಾಲ್ಕಿ: ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕನ್ನಡದ ಭವಿಷ್ಯದ ಬಗ್ಗೆ ಆತಂಕ ಬೇಡ- ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್
    ರಾಷ್ಟ್ರೀಯ ಸುದ್ದಿ December 9, 2022

    ಕನ್ನಡದ ಭವಿಷ್ಯದ ಬಗ್ಗೆ ಆತಂಕ ಬೇಡ- ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್

    By adminDecember 9, 2022No Comments2 Mins Read
    yogaraj bhat

    ಕನ್ನಡಕ್ಕೆ ಆತಂಕವಿದೆ. ಕನ್ನಡ ಮೂಲೆಗುಂಪಾಗುತ್ತದೆ ಎನ್ನುವ ಆತಂಕ ಸುಳ್ಳು’ ಎಂದು ಖ್ಯಾತ ಚಲನಚಿತ್ರ ನಿರ್ದೇಶಕರಾದ ಯೋಗರಾಜ ಭಟ್ ಅಭಿಪ್ರಾಯಪಟ್ಟರು.
    ಬಹುರೂಪಿ’ ಪ್ರಕಾಶನ ಹಾಗೂ ‘ಬ್ಲಾಸಮ್ ಬುಕ್ ಹೌಸ್’ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಖ್ಯಾತ ಕಿರುತೆರೆ ನಟಿ ರಂಜನಿ ರಾಘವನ್ ಅವರ ‘ಸ್ವೈಪ್ ರೈಟ್’ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

    ಕನ್ನಡ ಭಾಷೆ ಹುಟ್ಟಿದಾಗಿನಿಂದಲೂ ಭಾಷೆ ಮೂಲೆಗುಂಪಾಗುತ್ತಿದೆ ಎನ್ನುವ ಮಾತೂ ಕೇಳಿಬರುತ್ತಿದೆ. ಬೆಂಗಳೂರು ದಾಟಿದರೆ ಕನ್ನಡ ನೆಮ್ಮದಿಯಾಗಿಯೇ ಇದೆ. ಬೆಂಗಳೂರಿನಲ್ಲಿ ಮಾತ್ರ ನಾವು ಅನಗತ್ಯ ಗೊಂದಲಕ್ಕೆ ಒಳಗಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.

    ಇತ್ತೀಚೆಗೆ ಮಹಾಪ್ರಾಣ ಕಿತ್ತುಹಾಕಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಮಹಾಪ್ರಾಣ ಇರಬೇಕೇ, ಇಲ್ಲದಿರಬೇಕೇ ಎನ್ನುವುದಕ್ಕಿಂತ ಕನ್ನಡ ಮಾತನಾಡುತ್ತ ಇರಬೇಕು ಎನ್ನುವುದೇ ಮುಖ್ಯವಾಗಬೇಕು ಎಂದು ಯೋಗರಾಜ ಭಟ್ ಅವರು ಕಿವಿಮಾತು ಹೇಳಿದರು.
    ರಂಜನಿ ರಾಘವನ್ ಅವರ ಬರಹ ಸ್ತ್ರೀ ಸಮುದಾಯಕ್ಕೆ ಸಹಜವಾಗಿ ಇರುವ ಕಥನ ಕಲೆಯ ಹಿರಿಮೆಯನ್ನು ತೋರಿಸುತ್ತದೆ. ಕಥನ ಕಲೆ ರಂಜನಿ ಅವರಿಗೆ ಸಿದ್ಧಿಸಿದೆ ಎಂದರು.

    ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಕಾಲದಲ್ಲಿ ರಂಜನಿ ರಾಘವನ್ ಅವರು ದೊಡ್ಡ ಸಂಖ್ಯೆಯ ಓದುಗರನ್ನು ತಮ್ಮ ಬರಹದ ಮೂಲಕ ಸೃಷ್ಟಿಸಿದ್ದಾರೆ ಎಂದು ಪ್ರಶಂಸಿಸಿದರು. ಡಿಜಿಟಲ್ ಮಾಧ್ಯಮದ ಕಾಲಘಟ್ಟದಲ್ಲಿ ನಾವೆಲ್ಲರೂ ಕಲ್ಪನೆಯ ಲೋಕವನ್ನು ಕಳೆದುಕೊಂಡಿದ್ದೇವೆ. ಬುದ್ದಿ ಪ್ರಚೋದಕವಾಗಿರಲು ಓದು ಅತಿ ಮುಖ್ಯ ಎಂದರು.

    ಚಿತ್ರ ನಿರ್ದೇಶಕ ಮಂಸೋರೆ ಅವರು ಮಾತನಾಡಿ, ಚಿತ್ರ ನಿರ್ಮಿಸಿ ಅದರ ವಿತರಣೆ ಗೊತ್ತಾಗದೆ ಕಂಗಾಲಾಗುವಂತೆ ಪುಸ್ತಕ ಪ್ರಕಟಿಸಿ ಅದನ್ನು ಓದುಗರ ಬಳಿಗೆ ಕೊಂಡೊಯ್ಯುವ ದಾರಿ ಗೊತ್ತಾಗದೆ ಕಂಗಾಲಾಗುವ ಸ್ಥಿತಿ ಕನ್ನಡ ಪ್ರಕಾಶನ ರಂಗಕ್ಕೆ ಬಾರದಿರಲಿ ಎಂದು ಆಶಿಸಿದರು.

    ಖ್ಯಾತ ನಟಿ ರಂಜನಿ ರಾಘವನ್ ಅವರು ಮಾತನಾಡಿ, ಬರವಣಿಗೆ ನನಗೆ ಮುಕ್ತ ಸ್ವಾತಂತ್ರ್ಯದ ಅನುಭವವನ್ನು ಕೊಟ್ಟಿದೆ. ನನ್ನ ಕತೆಗಳನ್ನು ಓದಿ ಮೆಚ್ಚಿದ ಕಾರಣದಿಂದಾಗಿ ನನ್ನಲ್ಲಿ ಆತ್ಮವಿಶ್ವಾಸವೂ ಹೆಚ್ಚಿದೆ ಎಂದು ತಿಳಿಸಿದರು.

    ಹಿರಿಯ ಪತ್ರಕರ್ತರಾದ ಜೋಗಿ, ಬಹುರೂಪಿಯ ಜಿ ಎನ್ ಮೋಹನ್, ಶ್ರೀಜಾ ವಿ ಎನ್ , ಬ್ಲಾಸಮ್ ಬುಕ್ ಹೌಸ್ ನ ಮಾಯಿಗೌಡ, ಹೇಮಾ, ನಟ ಶ್ರೀನಿವಾಸ ಪ್ರಭು ಅವರು ಉಪಸ್ಥಿತರಿದ್ದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    Comments are closed.

    Our Picks

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ರೇಷ್ಮೆ ಸೀರೆಗೆ ಎಣ್ಣೆ, ಮೇಣದ ಕಲೆ ಬಿದ್ದರೆ ಚಿಂತೆ ಬೇಡ; ಈ ಟಿಪ್ಸ್ ಅನುಸರಿಸಿ

    November 4, 2026

    ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಮಹಿಳೆಯರು ಸಾಮಾನ್ಯವಾಗಿ ಸುಂದರವಾದ ರೇಷ್ಮೆ ಸೀರೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಹಬ್ಬದ…

    ನಾಯಿಗಳಲ್ಲ, ರೋಬೋಟ್‌ ಗಳಿಗೆ ವಾಕಿಂಗ್ ಮಾಡಿಸಿದರೆ ದುಡ್ಡು! AI ತಂತ್ರಜ್ಞಾನಕ್ಕೆ ಹೊಸ ಪ್ರಯೋಗ

    November 4, 2026

    ವಿಮಾನದಲ್ಲೂ ಇರುತ್ತಾ ಹಾರ್ನ್? ಆಕಾಶದಲ್ಲಿ ಯಾರಿಗೆ ಹಾರ್ನ್? | ಈ ಅಚ್ಚರಿಯ ಸಂಗತಿ ನಿಮಗೆ ಗೊತ್ತಾ?

    November 4, 2026

    ಫ್ರಿಜ್‌ ನಿಂದ ತೆಗೆದ ತಕ್ಷಣ ಮೊಸರು ತಿನ್ನುತ್ತೀರಾ? ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ?

    November 4, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.