nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗರ್ಭಕಂಠದ ಕ್ಯಾನ್ಸರ್ ನಿಂದ ಎಚ್ ಪಿ ವಿ ಲಸಿಕೆ ರಕ್ಷಣೆ ನೀಡುತ್ತದೆ: ತಹಶೀಲ್ದಾರ್ ಮೋಹನಕುಮಾರಿ

    March 13, 2026

    ಹಬ್ಬಗಳ ಆಚರಣೆಯ ಮಧ್ಯೆ ಧರ್ಮಗಳನ್ನು ತರಬಾರದು:  ಶಾಂತಿ ಸಭೆಯಲ್ಲಿ ಆರ್.ಕಿರಣ್

    March 13, 2026

    ಇಂದಿರಾ ಕ್ಯಾಂಟೀನ್‌ ಗೂ ತಟ್ಟಿದ ಸಿಲಿಂಡರ್ ಕೊರತೆ ಬಿಸಿ; ತುಮಕೂರಿನಲ್ಲಿ ಕ್ಯಾಂಟೀನ್ ಮುಚ್ಚುವ ಆತಂಕ

    March 13, 2026
    Facebook Twitter Instagram
    ಟ್ರೆಂಡಿಂಗ್
    • ಗರ್ಭಕಂಠದ ಕ್ಯಾನ್ಸರ್ ನಿಂದ ಎಚ್ ಪಿ ವಿ ಲಸಿಕೆ ರಕ್ಷಣೆ ನೀಡುತ್ತದೆ: ತಹಶೀಲ್ದಾರ್ ಮೋಹನಕುಮಾರಿ
    • ಹಬ್ಬಗಳ ಆಚರಣೆಯ ಮಧ್ಯೆ ಧರ್ಮಗಳನ್ನು ತರಬಾರದು:  ಶಾಂತಿ ಸಭೆಯಲ್ಲಿ ಆರ್.ಕಿರಣ್
    • ಇಂದಿರಾ ಕ್ಯಾಂಟೀನ್‌ ಗೂ ತಟ್ಟಿದ ಸಿಲಿಂಡರ್ ಕೊರತೆ ಬಿಸಿ; ತುಮಕೂರಿನಲ್ಲಿ ಕ್ಯಾಂಟೀನ್ ಮುಚ್ಚುವ ಆತಂಕ
    • ಚಿಕ್ಕನಾಯಕನಹಳ್ಳಿಯಲ್ಲಿ ಅಡುಗೆ ಅನಿಲ ಅಭಾವ: ಕಾಳಸಂತೆ ಮಾರಾಟ ಆರೋಪಿಸಿ ಗ್ರಾಹಕರ ಪ್ರತಿಭಟನೆ
    • ಪಾವಗಡ: ಎಲ್‌ ಪಿಜಿ ಸಿಲಿಂಡರ್‌ ಗಾಗಿ ಗ್ರಾಹಕರ ಪರದಾಟ; ವಿತರಣಾ ಕೇಂದ್ರದ ಮುಂದೆ ಕ್ಯೂ
    • ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ
    • ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ
    • ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕ್ಷೇತ್ರಾದ್ಯಂತ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ: ಶಾಸಕ ವೆಂಕಟರಮಣಪ್ಪ
    ಪಾವಗಡ January 5, 2023

    ಕ್ಷೇತ್ರಾದ್ಯಂತ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ: ಶಾಸಕ ವೆಂಕಟರಮಣಪ್ಪ

    By adminJanuary 5, 2023No Comments2 Mins Read
    pavagada

    ಪಾವಗಡ : ಕ್ಷೇತ್ರಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಜೆಡಿಎಸ್ ಪಕ್ಷದ ಶಾಸಕರ ಕಾಲದಲ್ಲಿ ಆಗಿರುವ ಅಭಿವೃದ್ಧಿ  ಮತ್ತು ನಾನು  ಮಾಡಿರುವ ಅಭಿವೃದ್ಧಿ  ಕೆಲಸಗಳನ್ನು ಕ್ಷೇತ್ರದ ಮತದಾರರು ತುಲನೆ ಮಾಡಿದ ನಂತರ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.

    ತಾಲ್ಲೂಕಿನ ನಿಡಗಲ್ ಹೋಬಳಿಯ ಗುಜ್ಜನಡು, ಮಂಗಳವಾಡ ಹಾಗೂ ಅರಸೀಕೆರೆ ಗ್ರಾಮ ಪಂಚಾಯತಿ  ಭಾಗದಲ್ಲಿ ಗುರುವಾರ ಜಲಜೀವನ್ ಯೋಜನೆ ಮತ್ತು ಶಾಸಕರ ಪ್ರಾದೇಶಿಕ ಅಭಿವೃದ್ಧಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಅನುದಾನದ ಅಡಿಯಲ್ಲಿ  ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.


    Provided by
    Provided by

    ಗುಜ್ಜನಡು ಗ್ರಾಮದಿಂದ ಚಿನ್ನಮ್ಮನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ  1.50 ಕೋಟಿ, ಮದ್ದೆ ಗ್ರಾಮದಿಂದ ಸ್ವಾರಮ್ಮನ ದೇವಸ್ಥಾನ ಮಾರ್ಗದ ರಸ್ತೆ ಅಭಿವೃದ್ಧಿಗೆ 50 ಲಕ್ಷ, ಪಾವಗಡ ಮತ್ತು ಅರಸೀಕೆರೆಯ ಮುಖ್ಯ ರಸ್ತೆಯಿಂದ ಪೆಮ್ಮನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ 25 ಲಕ್ಷ, ಮರೂರು ಮತ್ತು ಹೊಸಹಳ್ಳಿ ರಸ್ತೆ ಅಭಿವೃದ್ಧಿಗೆ 25 ಲಕ್ಷ, ಮಂಗಳವಾಡ ಗ್ರಾಮದಲ್ಲಿ ನಾಡಕಚೇರಿ ಕಟ್ಟಡಕ್ಕಾಗಿ  24 ಲಕ್ಷ ಹಾಗೂ ಮಡಿವಾಳ ಕಾಲೋನಿಯಲ್ಲಿರುವ ಶ್ರೀ ಲಕ್ಷ್ಮಿ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣಕ್ಕಾಗಿ 5 ಲಕ್ಷ ನೀಡಲಾಗಿದೆ. ಜಲಜೀವನ್ ಯೋಜನೆ ಅಡಿಯಲ್ಲಿ ಗುಜ್ಜನಡು ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಗ್ರಾಮಗಳಾದ ಗೌಡಕಾರನಹಟ್ಟಿಗೆ 29.70 ಲಕ್ಷ, ಜೋಗದಹಟ್ಟಿ 69.50 ಎ ಹೆಚ್ ಪಾಳ್ಯ 29.80 ಲಕ್ಷ ಸಿ ಆರ್ ಪಾಳ್ಯ 49.70 ಲಕ್ಷ,  ಸಿ.ಹೆಚ್.ಪಾಳ್ಯ 55.20 ಲಕ್ಷ , ಟಿಎನ್ ಬೆಟ್ಟ 82.60 ಲಕ್ಷ,  ಯರ್ರಮ್ಮನಹಟ್ಟಿ 20.20 ಲಕ್ಷ, ಗುಜ್ಜನಡು ಎಕೆಸಿ 58.30 ಲಕ್ಷ ,  ಚಿನ್ನಮ್ಮನಹಳ್ಳಿ ಮತ್ತು ಚಿನ್ನಮ್ಮನಹಳ್ಳಿ ಬೋವಿ ಹಾಗೂ ಮುತ್ತರಾಯನ ಕಾಲೋನಿಗೆ 69.10 ಲಕ್ಷ  ದವಡಬೆಟ್ಟ ಮತ್ತು ದವಡಬೆಟ್ಟ ತಾಂಡಕ್ಕೆ 85 ಲಕ್ಷ ನೀಡಲಾಗಿದೆ ಎಂದು  ಇದೇ ವೇಳೆ ಶಾಸಕರು ತಿಳಿಸಿದರು.

    ಈ ಸಂದರ್ಭದಲ್ಲಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ.ವೆಂಕಟೇಶ್, ವರದರಾಜ್ ತಹಶಿಲ್ದಾರ ಪಾವಗಡ, ಎಪಿಎಂಸಿ ಮಾಜಿ ಅಧ್ಯಕ್ಷ ಡಿಮಂಜುನಾಥ್, ಕೆ.ಹೆಚ್.ಪ್ರಕಾಶ್,     ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋಪಿ, ಸ್ವಾರಣ್ಣ, ನಂಜುಂಡಯ್ಯ ಶೆಟ್ಟಿ, ಭೋಜರಾಜ್, ಮುಗದಾಳ ಬೆಟ್ಟ ನರಸಿಂಹಯ್ಯ, ಕೆ.ಟಿ.ಹಳ್ಳಿ ಚಿಕ್ಕಣ್ಣ, ಶಂಕರ್ ರೆಡ್ಡಿ, ಪುರಸಭಾ ಸದಸ್ಯ ರಾಜೇಶ್, ಗ್ರಾ.ಪಂ. ಅಧ್ಯಕ್ಷೆ ಮಧು ನಾಗಭೂಷಣ್, ಮಾಜಿ ಅಧ್ಯಕ್ಷ ಮೂರ್ತಿ, ಮುಖಂಡ ಮೂಡಲಗಿರಿಯಪ್ಪ, ವಿರೇಶ್, ವಡ್ಡಗೇರಮ್ಮ, ಪೆಮ್ಮನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಉಜ್ಜಿನಪ್ಪ , ನಾಗಮ್ಮ, ಮುಖಂಡರಾದ ದೊಡ್ಡೇಗೌಡ, ಶಿಲ್ಪಾಚಾರಿ, ಪಿ.ಜಿ.ನರಸಿಂಹಯ್ಯ ಹಾಗೂ ಕಾರ್ಯಕರ್ತರು ಹಾಜರಿದ್ದರು.

    ವರದಿ: ರಾಮಪ್ಪ ಸಿ.ಕೆ.ಪುರ,  ಪಾವಗಡ


     

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಪಾವಗಡ: ಎಲ್‌ ಪಿಜಿ ಸಿಲಿಂಡರ್‌ ಗಾಗಿ ಗ್ರಾಹಕರ ಪರದಾಟ; ವಿತರಣಾ ಕೇಂದ್ರದ ಮುಂದೆ ಕ್ಯೂ

    March 13, 2026

    ಪಾವಗಡ: ಸಾಧಕರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನ

    March 6, 2026

    ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು

    February 8, 2026

    Comments are closed.

    Our Picks

    ಕರೆಯದೇ ಮದುವೆಗೆ ಬಂದ್ರೆ ಹುಷಾರ್: 3 ತಿಂಗಳು ಜೈಲು, 5 ಸಾವಿರ ದಂಡ: ಪೋಸ್ಟರ್ ಕಂಡು ಜನ ಶಾಕ್

    March 12, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಗರ್ಭಕಂಠದ ಕ್ಯಾನ್ಸರ್ ನಿಂದ ಎಚ್ ಪಿ ವಿ ಲಸಿಕೆ ರಕ್ಷಣೆ ನೀಡುತ್ತದೆ: ತಹಶೀಲ್ದಾರ್ ಮೋಹನಕುಮಾರಿ

    March 13, 2026

    ಸರಗೂರು:  ಎಚ್ ಪಿ ವಿ ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಗೆ ಮುಖ್ಯ ಕಾರಣವಾದ ಹ್ಯೂಮನ್ ಪ್ಯಾಪಿಲೋಮ ವೈರಸ್ ಸೋಂಕಿನಿಂದ ರಕ್ಷಣೆ…

    ಹಬ್ಬಗಳ ಆಚರಣೆಯ ಮಧ್ಯೆ ಧರ್ಮಗಳನ್ನು ತರಬಾರದು:  ಶಾಂತಿ ಸಭೆಯಲ್ಲಿ ಆರ್.ಕಿರಣ್

    March 13, 2026

    ಇಂದಿರಾ ಕ್ಯಾಂಟೀನ್‌ ಗೂ ತಟ್ಟಿದ ಸಿಲಿಂಡರ್ ಕೊರತೆ ಬಿಸಿ; ತುಮಕೂರಿನಲ್ಲಿ ಕ್ಯಾಂಟೀನ್ ಮುಚ್ಚುವ ಆತಂಕ

    March 13, 2026

    ಚಿಕ್ಕನಾಯಕನಹಳ್ಳಿಯಲ್ಲಿ ಅಡುಗೆ ಅನಿಲ ಅಭಾವ: ಕಾಳಸಂತೆ ಮಾರಾಟ ಆರೋಪಿಸಿ ಗ್ರಾಹಕರ ಪ್ರತಿಭಟನೆ

    March 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.