ಸ್ನಾನ ಮಾಡುವ ವೇಳೆ ಸಾಕಷ್ಟು ಜನರು ಅನೇಕ ತಪ್ಪುಗಳನ್ನು ಮಾಡುತ್ತಾರೆ. ಇಂತಹ ತಪ್ಪುಗಳಿಂದ ಅವರು ಬೇಗನೇ ತಮ್ಮ ತಲೆ ಕೂದಲನ್ನು ಕಳೆದುಕೊಳ್ಳುತ್ತಾರೆ. ಕೆಲವೊಂದು ವಿಚಾರಗಳು ನಮಗೆ ಗಂಭೀರ ಅಂತ ಅನ್ನಿಸದೇ ಇದ್ದರೂ ಕೂಡ, ಅದು ನಮ್ಮ ಕೂದಲಿಗೆ ಗಂಭೀರವಾದ ಹಾನಿಯನ್ನು ಮಾಡಬಹುದು.
ನಾವು ಸ್ನಾನ ಮಾಡುವ ವೇಳೆ ಕೆಲವೊಂದು ವಿಚಾರಗಳನ್ನು ಗಮನಿಸಲೇ ಬೇಕು. ಕೆಲವರು ಅತೀ ಹೆಚ್ಚು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುತ್ತಾರೆ. ಇದರಿಂದ ತಲೆಗೂದಲಿಗೆ ಹಾನಿಯಾಗಬಹುದು.
ಹೇರ್ ಡ್ರೈಯರ್ ಗಳು ಮತ್ತು ಹೇರ್ ಸ್ಟ್ರೈಟ್ ನರ್ ಗಳ ಶಾಖವು ಕೂದಲನ್ನು ಬಹು ಬೇಗನೇ ಹಾನಿ ಮಾಡುತ್ತದೆ. ಹೆಚ್ಚು ಬಿಸಿ ನೀರಿನಿಂದ ತಲೆಯನ್ನು ಪದೇ ಪದೇ ತೊಳೆಯುವುದರಿಂದ ಕೂದಲು ದೌರ್ಬಲ್ಯಗೊಂಡು ಉದುರುತ್ತವೆ.
ಇನ್ನೂ ಹೆಚ್ಚಿನ ಜನರು ತಪ್ಪಾದ ಶ್ಯಾಂಪುಗಳನ್ನು ಉಪಯೋಗಿಸುತ್ತಾರೆ. ಇದರಿಂದ ಕೂದಲು ಉದುರುವಿಕೆ ಹೆಚ್ಚಳವಾಗಬಹುದು. ಸಾಧ್ಯವಾದರೆ ಶ್ಯಾಂಪುಗಳನ್ನು ಬಳಸದೇ ಇರುವುದೇ ಅತ್ಯುತ್ತಮ. ಶ್ಯಾಂಪು ಬದಲು ತಲೆ ಕೂದಲಿಗೆ ಪ್ರಕೃತಿ ದತ್ತವಾದ ವಸ್ತುಗಳನ್ನು ಬಳಸುವುದು ಉತ್ತಮ. ಒಂದು ವೇಳೆ ಶ್ಯಾಂಪು ಬಳಸ ಬೇಕಾದರೆ, ವೈದ್ಯರ ಸಲಹೆ ಪಡೆದು ಬಳಸುವುದು ಉತ್ತಮ.
ಇನ್ನೂ ಕೂದಲನ್ನು ಹೆಚ್ಚು ತಿಕ್ಕಿ(ರಬ್ ಮಾಡಿ) ತೊಳೆಯುವುದರಿಂದಲೂ ಕೂದಲಿಗೆ ಹಾನಿಯಾಗ ಬಹುದು. ಕೂದಲನ್ನು ಹಗುರವಾದ ಕೈಗಳಿಂದ ತಿಕ್ಕಿ ಸ್ನಾನ ಮಾಡುವುದು ಉತ್ತಮ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1