nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸ್ವಾತಂತ್ರ್ಯ ದಿನಾಚರಣೆ : ಆ.14ರಂದು ವಿವಿಧ ಸ್ಪರ್ಧೆ

    August 12, 2026

    ಗುಬ್ಬಿ: ಆ.17ರಿಂದ22ರವರೆಗೆ  ಕೇರಳದ ಸಮರ ಕಲೆ ಕಲರಿಪಯಟ್ಟು ಶಿಬಿರ

    August 12, 2026

    ಆಟೋ ಹಾಗೂ ಟ್ಯಾಂಕರ್ ಡಿಕ್ಕಿ: ಆರು ಜನ ಕೂಲಿ ಕಾರ್ಮಿಕರ ದಾರುಣ ಸಾವು; ಸಚಿವ ಈಶ್ವರ ಖಂಡ್ರೆ ಸಂತಾಪ

    August 12, 2026
    Facebook Twitter Instagram
    ಟ್ರೆಂಡಿಂಗ್
    • ಸ್ವಾತಂತ್ರ್ಯ ದಿನಾಚರಣೆ : ಆ.14ರಂದು ವಿವಿಧ ಸ್ಪರ್ಧೆ
    • ಗುಬ್ಬಿ: ಆ.17ರಿಂದ22ರವರೆಗೆ  ಕೇರಳದ ಸಮರ ಕಲೆ ಕಲರಿಪಯಟ್ಟು ಶಿಬಿರ
    • ಆಟೋ ಹಾಗೂ ಟ್ಯಾಂಕರ್ ಡಿಕ್ಕಿ: ಆರು ಜನ ಕೂಲಿ ಕಾರ್ಮಿಕರ ದಾರುಣ ಸಾವು; ಸಚಿವ ಈಶ್ವರ ಖಂಡ್ರೆ ಸಂತಾಪ
    • ತುಮಕೂರು: ಮಹಾನ್ ಕ್ರಾಂತಿಕಾರಿ ಖುದಿರಾಮ್ ಬೋಸ್ 118ನೇ ಹುತಾತ್ಮ ದಿನಾಚರಣೆ – ಎಐಡಿಎಸ್ ಒ ವತಿಯಿಂದ ಶ್ರದ್ಧಾಂಜಲಿ
    • ಸರಗೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ₹3.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಚಾಲನೆ
    • ಸಚಿವ ಈಶ್ವರ ಖಂಡ್ರೆ ಆಗಮನ ವೇಳೆ ಗದ್ದಲ: ಮುಜುಗರದಿಂದ ಪ್ರವಚನ ಅರ್ಧಕ್ಕೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ!
    • ನೂತನ ಸಚಿವರಿಗೆ ಸರ್ಕಾರಿ ನಿವಾಸ ಹಾಗೂ ಕಾರು ಹಂಚಿಕೆ: ಡಿಪಿಎಆರ್ ಆದೇಶ
    • ಆಗಸ್ಟ್ 14 ರಂದು ಕರ್ನಾಟಕ ವಿಧಾನಸಭೆಗೆ ಹೊಸ ಸ್ಪೀಕರ್ ಆಯ್ಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನನ್ನ ಕಣ್ಣೀರು ನೋಡಿ ಗೇಲಿ ಮಾಡುತ್ತಾರೆ, ಆದ್ರೆ ಜನರ ಕಷ್ಟ ನೋಡಿ ನನಗೆ ಕಣ್ಣೀರು ಬರುತ್ತದೆ: ಕುಮಾರಸ್ವಾಮಿ
    ರಾಜ್ಯ ಸುದ್ದಿ February 5, 2023

    ನನ್ನ ಕಣ್ಣೀರು ನೋಡಿ ಗೇಲಿ ಮಾಡುತ್ತಾರೆ, ಆದ್ರೆ ಜನರ ಕಷ್ಟ ನೋಡಿ ನನಗೆ ಕಣ್ಣೀರು ಬರುತ್ತದೆ: ಕುಮಾರಸ್ವಾಮಿ

    By adminFebruary 5, 2023No Comments2 Mins Read
    kumaraswamy

    ತಿಪಟೂರು : ನನ್ನ ಕಣ್ಣೀರನ್ನು ನೋಡಿ ಹಲವಾರು ನಾಟಕವೆನ್ನುತ್ತಾರೆ, ಆದರೆ ಇದು ರಾಜ್ಯದ ಜನತೆಯ ಸಂಕಷ್ಟವನ್ನು ನೋಡಿ ಬರುತ್ತಿರುವ ಕಣ್ಣೀರು, ಹೃದಯದಿಂದ ಬರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು.

    ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕೆ.ಟಿ.ಶಾಂತಕುಮಾರ್ ಜೆ.ಡಿ.ಎಸ್ ಸೇರ್ಪಡೆ ಹಾಗೂ ಜೆ.ಡಿ.ಎಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಕಣ್ಣೀರು ಹಾಕುವುದನ್ನು ನೋಡಿ, ಕೆಲವರು ಗೇಲಿ ಮಾಡುತ್ತಾರೆ. ಯಾರ ಹೃದಯದಲ್ಲಿ ನೋವಿರುತ್ತದೋ ಅದು ಕಣ್ಣೀರಾಗಿ ಹರಿಯುತ್ತದೆ. ನನ್ನ ಕಣ್ಣೀರು ಅಂತಹದ್ದು ಎಂದರು.

    ರಾಜ್ಯದಲ್ಲಿ 2 ರಾಷ್ಟ್ರೀಯ ಪಕ್ಷಗಳು ಅಧಿಕಾರವನ್ನು ಮಾಡುತ್ತಾ ಜನರಿಗೆ ಇಲ್ಲದ ತೆರಿಗೆ ಹಾಕಿ ಜನರ ದುಡ್ಡಿನಲ್ಲಿ ಸರ್ಕಾರಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆಯೇ , ಹೊರತು ಯಾವುದೇ ಕಾರಣಕ್ಕೂ  ಜನರ ಸಮಸ್ಯೆಯ ಬಗ್ಗೆ ಕಾಳಜಿ ಅವರಿಗಿಲ್ಲ. ಇವರಿಗೆ ಜನರ ಮತಗಳು ಮಾತ್ರ ಬೇಕು, ಜನರ ಸಮಸ್ಯೆ ಬೇಡ. ಇಂತಹ ರಾಜಕಾರಣಿಗಳು ನಿಮಗೇ ಬೇಕೆ ಎಂದು ಪ್ರಶ್ನಿಸಿದ ಅವರು, ನಾನು ಪಂಚರತ್ನ ಯಾತ್ರೆಯನ್ನು ಯಶಸ್ವಿಯಾಗುತ್ತಿರುವುದು ಅವರ ಕಣ್ಣುರಿಯಾಗುತ್ತಿದೆ. ಅವರು ಕಣ್ಣೀರು ಹಾಕುವ ಪರಿಸ್ಥಿತಿಗೆ ಬರುತ್ತದೆ ಎನ್ನುವ ಭಯವನ್ನು ಕಾಡುತ್ತಿದೆ. ಇನ್ನು ರಾಜ್ಯದಲ್ಲಿ ಜೆ.ಡಿ.ಎಸ್‌ ಗೆ ಸಂಪೂರ್ಣ ಅಧಿಕಾರ ನೀಡಿದರೆ ನಮ್ಮ ಆರೋಗ್ಯ, ಶಿಕ್ಷಣ, ಸ್ತ್ರೀಯರ ಅಭ್ಯುದಯ, ರೈತರ ಚೈತನ್ಯ, ವಸತಿ ಸೇರಿದಂತೆ ಜನರಿಗೆ ನೆಮ್ಮದಿಯ ಆಳ್ವಿಕೆನ್ನು ನೀಡುವುದೇ ನಮ್ಮ ಗುರಿಯಾಗಿದೆ. ನಮ್ಮ ಪಕ್ಷ ಸಿದ್ಧಾಂತವನ್ನು ಮೆಚ್ಚಿ ಬಂದಿರುವ ಕೆ.ಟಿ.ಶಾಂತ್‌ಕುಮಾರ್ ಬೆಂಬಲಿಸಿ ಜೆ.ಡಿ.ಎಸ್‌ಅನ್ನು ಅಧಿಕಾರಕ್ಕೆ ತರುವುದೇ ನಿಮ್ಮ ಗುರಿಯಾಗಬೇಕೆಂದು ಕರೆನೀಡಿದರು.

    ಜೆ.ಡಿ.ಎಸ್ ಪಕ್ಷ ಸೇರ್ಪಡೆಗೊಂಡು ಮಾತನಾಡಿದ ಕೆ.ಟಿ.ಶಾಂತ್‌ಕುಮಾರ್, ನಾನು ಬಂದಿದ್ದೇ ಕುಮಾರಣ್ಣನ ಪೋಟೋ ಹಾಕಿಕೊಂಡು, ಜನಸೇವೆ ಮಾಡಿದೆ, ಬರಗಾಲದಲ್ಲಿ ಕುಡಿಯುವ ನೀರನ್ನು ಕೊಟ್ಟಿದ್ದೇನೆ, ಕೊರೊನಾ ಸಂಕಷ್ಟದಲ್ಲಿ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ನನಗೆ ಜೆ.ಡಿ.ಎಸ್ ನೆಲೆ ನೀಡಿದ್ದು, ಇಲ್ಲಿಯೇ ದುಡಿದು ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಪ್ರಮಾಣಮಾಡುತ್ತೇನೆ ಎಂದರು.

    ಕಾರ್ಯಕ್ರಮದಲ್ಲಿ ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿಶಾಸಕರುಗಳಾದ ಎಂ.ಟಿ.ಕೃಷ್ಣಪ್ಪ, ಡಿ.ನಾಗರಾಜಯ್ಯ, ಸುರೇಶ್‌ಬಾಬು, ಜೆಡಿಎಸ್ ಮುಖಂಡ ಬೋಜೇಗೌಡ, ಜಕ್ಕನಹಳ್ಳಿ ಲಿಂಗರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲ್ಲೂಕು ಕಾರ್ಯಧ್ಯಕ್ಷ ಸೂಗೂರು ಶಿವಸ್ವಾಮಿ, ಮಾಜಿ ನಗರಸಭಾ ಸದಸ್ಯೆ ರೇಖಾ ಅನುಪ್, ಮಾಜಿ ಜಿ.ಪಂ.ಸದಸ್ಯೆ ರಾಧಾ ನಾರಾಯಣಗೌಡ ಸೇರಿದಂತೆ ಹಲವರು ಇದ್ದರು.

     ವರದಿ: ಆನಂದ್, ತಿಪಟೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    admin
    • Website

    Related Posts

    ಸಚಿವ ಈಶ್ವರ ಖಂಡ್ರೆ ಆಗಮನ ವೇಳೆ ಗದ್ದಲ: ಮುಜುಗರದಿಂದ ಪ್ರವಚನ ಅರ್ಧಕ್ಕೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ!

    August 12, 2026

    ನೂತನ ಸಚಿವರಿಗೆ ಸರ್ಕಾರಿ ನಿವಾಸ ಹಾಗೂ ಕಾರು ಹಂಚಿಕೆ: ಡಿಪಿಎಆರ್ ಆದೇಶ

    August 12, 2026

    ಆಗಸ್ಟ್ 14 ರಂದು ಕರ್ನಾಟಕ ವಿಧಾನಸಭೆಗೆ ಹೊಸ ಸ್ಪೀಕರ್ ಆಯ್ಕೆ

    August 12, 2026

    Comments are closed.

    Our Picks

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಸ್ವಾತಂತ್ರ್ಯ ದಿನಾಚರಣೆ : ಆ.14ರಂದು ವಿವಿಧ ಸ್ಪರ್ಧೆ

    August 12, 2026

    ತುಮಕೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ಆಗಸ್ಟ್ 14ರಂದು ಬೆಳಿಗ್ಗೆ 11 ಗಂಟೆಗೆ 5 ರಿಂದ…

    ಗುಬ್ಬಿ: ಆ.17ರಿಂದ22ರವರೆಗೆ  ಕೇರಳದ ಸಮರ ಕಲೆ ಕಲರಿಪಯಟ್ಟು ಶಿಬಿರ

    August 12, 2026

    ಆಟೋ ಹಾಗೂ ಟ್ಯಾಂಕರ್ ಡಿಕ್ಕಿ: ಆರು ಜನ ಕೂಲಿ ಕಾರ್ಮಿಕರ ದಾರುಣ ಸಾವು; ಸಚಿವ ಈಶ್ವರ ಖಂಡ್ರೆ ಸಂತಾಪ

    August 12, 2026

    ತುಮಕೂರು: ಮಹಾನ್ ಕ್ರಾಂತಿಕಾರಿ ಖುದಿರಾಮ್ ಬೋಸ್ 118ನೇ ಹುತಾತ್ಮ ದಿನಾಚರಣೆ – ಎಐಡಿಎಸ್ ಒ ವತಿಯಿಂದ ಶ್ರದ್ಧಾಂಜಲಿ

    August 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.