ಮಧುಗಿರಿ: ದೊಡ್ಡೇರಿ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದೊಡ್ಡೇರಿ ಕ್ಲಸ್ಟರ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ಆಯೋಜನೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಾಸಪ್ಪನವರು ಮಾತನಾಡಿ, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲಿ ಉತ್ತಮವಾದ ಗುಣಮಟ್ಟದ ಬೋಧನೆ, ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡಿರುತ್ತವೆ. ಇದನ್ನು ತಮ್ಮ ಮಕ್ಕಳು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ನಮ್ಮ ಮಕ್ಕಳು ಓದುವುದರಿಂದ ಕನ್ನಡ ಉಳಿಸುವಂತೆ ಮಾಡಬಹುದು ಎಂದು ಕರೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕರಾದ ನರಸಪ್ಪನವರು ಮಾತನಾಡಿ, ಇಂದು ಶಾಲಾ ವಾರ್ಷಿಕೋತ್ಸವಕ್ಕೆ ಎಲ್ಲಾ ಮಕ್ಕಳ ತಂದೆ ತಾಯಂದಿರ ಆಶೀರ್ವಾದದೊಂದಿಗೆ, ಊರಿನ ಗಣ್ಯರೊಂದಿಗೆ ನಡೆಯುತ್ತಿರುವುದು ಸಂತೋಷ ತಂದಿದೆ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಾರ್ಯಕ್ರಮಗಳು ಆಯೋಜನೆ ಮಾಡಿದರೆ, ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳ ಕಾರ್ಯಕ್ರಮಕ್ಕಿಂತ ನಮ್ಮ ಸರ್ಕಾರಿ ಶಾಲೆ ಉತ್ತಮ ಎಂದು ನೋಡಿಸಬಹುದಾಗಿರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದಲ್ಲಿ ಆಯ್ಕೆಯಾದ ರಾಜ್ಯಮಟ್ಟ ಮತ್ತು ಜಿಲ್ಲಾಮಟ್ಟದ ಮಕ್ಕಳಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜನ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗಮಣಿ ರಂಗಸ್ವಾಮಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಮುಖ್ಯ ಶಿಕ್ಷಕರಾದ ನರಸಪ್ಪ, ಸಹ ಶಿಕ್ಷಕರು ಪಾಪಣ್ಣನವರು ಎಸ್ ಡಿ ಎಂ ಸಿ ಅಧ್ಯಕ್ಷರು ದಾಸಪ್ಪನವರು ಹಾಗೂ ಕಮಿಟಿ ಸದಸ್ಯರುಗಳು ಹಳೆ ವಿದ್ಯಾರ್ಥಿಗಳ ಸಂಘದವರು ನಾಗರಿಕ ಬಂಧುಗಳು ಶಾಲಾ ಮಕ್ಕಳ ತಂದೆ ತಾಯಂದಿರು ಭಾಗವಹಿಸಿದರು
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy