nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸ್ವಾತಂತ್ರ್ಯ ದಿನಾಚರಣೆ : ಆ.14ರಂದು ವಿವಿಧ ಸ್ಪರ್ಧೆ

    August 12, 2026

    ಗುಬ್ಬಿ: ಆ.17ರಿಂದ22ರವರೆಗೆ  ಕೇರಳದ ಸಮರ ಕಲೆ ಕಲರಿಪಯಟ್ಟು ಶಿಬಿರ

    August 12, 2026

    ಆಟೋ ಹಾಗೂ ಟ್ಯಾಂಕರ್ ಡಿಕ್ಕಿ: ಆರು ಜನ ಕೂಲಿ ಕಾರ್ಮಿಕರ ದಾರುಣ ಸಾವು; ಸಚಿವ ಈಶ್ವರ ಖಂಡ್ರೆ ಸಂತಾಪ

    August 12, 2026
    Facebook Twitter Instagram
    ಟ್ರೆಂಡಿಂಗ್
    • ಸ್ವಾತಂತ್ರ್ಯ ದಿನಾಚರಣೆ : ಆ.14ರಂದು ವಿವಿಧ ಸ್ಪರ್ಧೆ
    • ಗುಬ್ಬಿ: ಆ.17ರಿಂದ22ರವರೆಗೆ  ಕೇರಳದ ಸಮರ ಕಲೆ ಕಲರಿಪಯಟ್ಟು ಶಿಬಿರ
    • ಆಟೋ ಹಾಗೂ ಟ್ಯಾಂಕರ್ ಡಿಕ್ಕಿ: ಆರು ಜನ ಕೂಲಿ ಕಾರ್ಮಿಕರ ದಾರುಣ ಸಾವು; ಸಚಿವ ಈಶ್ವರ ಖಂಡ್ರೆ ಸಂತಾಪ
    • ತುಮಕೂರು: ಮಹಾನ್ ಕ್ರಾಂತಿಕಾರಿ ಖುದಿರಾಮ್ ಬೋಸ್ 118ನೇ ಹುತಾತ್ಮ ದಿನಾಚರಣೆ – ಎಐಡಿಎಸ್ ಒ ವತಿಯಿಂದ ಶ್ರದ್ಧಾಂಜಲಿ
    • ಸರಗೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ₹3.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಚಾಲನೆ
    • ಸಚಿವ ಈಶ್ವರ ಖಂಡ್ರೆ ಆಗಮನ ವೇಳೆ ಗದ್ದಲ: ಮುಜುಗರದಿಂದ ಪ್ರವಚನ ಅರ್ಧಕ್ಕೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ!
    • ನೂತನ ಸಚಿವರಿಗೆ ಸರ್ಕಾರಿ ನಿವಾಸ ಹಾಗೂ ಕಾರು ಹಂಚಿಕೆ: ಡಿಪಿಎಆರ್ ಆದೇಶ
    • ಆಗಸ್ಟ್ 14 ರಂದು ಕರ್ನಾಟಕ ವಿಧಾನಸಭೆಗೆ ಹೊಸ ಸ್ಪೀಕರ್ ಆಯ್ಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಿದ್ಧರಾಮಯ್ಯ ಕೇವಲ ಕಾಫೀ – ತಿಂಡಿ – ಬಿಸ್ಕೆಟ್‍ ಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ: ಎನ್.ಆರ್.ರಮೇಶ್ ಆರೋಪ
    Uncategorized March 7, 2023

    ಸಿದ್ಧರಾಮಯ್ಯ ಕೇವಲ ಕಾಫೀ – ತಿಂಡಿ – ಬಿಸ್ಕೆಟ್‍ ಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ: ಎನ್.ಆರ್.ರಮೇಶ್ ಆರೋಪ

    By adminMarch 7, 2023No Comments3 Mins Read
    ramesh

    ಸಿದ್ಧರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ಕೇವಲ ಕಾಫೀ – ತಿಂಡಿ – ಬಿಸ್ಕೆಟ್‍ ಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

    ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಈ ಸಂಬಂಧ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಎನ್.ಆರ್ ರಮೇಶ್, ಸಿದ್ಧರಾಮಯ್ಯ ಮತ್ತು ಅವರ ಕಛೇರಿಯ ಸಿಬ್ಬಂದಿವರ್ಗ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಯ ಅಂದಿನ ಅಧಿಕಾರಿಗಳು ಭಾಗಿಗಳಾಗಿ ಬೃಹತ್ ಹಗರಣ ನಡೆದಿದೆ. 2013-14 ರಿಂದ 2017-18 ರವರೆಗಿನ 05 ವರ್ಷಗಳ ಅವಧಿಯಲ್ಲಿ – ಮುಖ್ಯಮಂತ್ರಿಗಳ ಕಛೇರಿಯ ಸಭೆಗಳು ಮತ್ತು ಮುಖ್ಯಮಂತ್ರಿಗಳ ಕಛೇರಿಗೆ ವಿವಿಧ ಕಾರ್ಯಗಳ ಪ್ರಯುಕ್ತ ಹೊರಗಿನಿಂದ ಬರುವಂತಹ ಅತಿಥಿಗಳ / ಗಣ್ಯರ ಉಪಚಾರ ಕಾರ್ಯಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಲಾಗಿದೆ. ಈ 05 ವರ್ಷಗಳ ಅವಧಿಯಲ್ಲಿ ಕೇವಲ ಮುಖ್ಯಮಂತ್ರಿಗಳ ಕಛೇರಿಯ ಕಾರ್ಯಗಳಿಗೆ ಕಾಫೀ – ಟೀ – ತಿಂಡಿ – ಸ್ನಾಕ್ಸ್ – ಉಪಹಾರ ಪೂರೈಕೆ ಕಾರ್ಯಗಳಿಗೆಂದು ವೆಚ್ಛ ಮಾಡಿರುವ ಒಟ್ಟು ಮೊತ್ತ ₹. 200,62,93,027/- ಗಳು. ನಂಬಲ ಸಾಧ್ಯವಾದರೂ ಸಹ ಇದು ಸತ್ಯ ಎಂದು ಹೇಳಿದರು.

    ಕರ್ನಾಟಕ ಸರ್ಕಾರದ “ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ” ಹಾಗೂ “ರಾಜ್ಯ ಅತಿಥಿ ಗೃಹಗಳ ವಿಭಾಗ”ದ ಅಧಿಕಾರಿಗಳು RTI ಕಾಯ್ದೆಯಡಿಯಲ್ಲಿ ನೀಡಿರುವ ಅಧಿಕೃತ ದಾಖಲೆಗಳಿಂದ ಈ ಆಘಾತಕಾರಿ ಮಾಹಿತಿಗಳು ಬಯಲಾಗಿದೆ. 5 ವರ್ಷಗಳಲ್ಲಿನ 410 ರಜಾ ದಿನಗಳನ್ನೂ ಸೇರಿಸಿಕೊಂಡರೆ ಪ್ರತಿಯೊಂದು ದಿನಕ್ಕೆ ಸರಾಸರಿ 11 ಲಕ್ಷ ರೂಪಾಯಿ ವೆಚ್ಛ. 410 ರಜಾ ದಿನಗಳನ್ನು ಹೊರತುಪಡಿಸಿದರೆ ಪ್ರತಿಯೊಂದು ದಿನಕ್ಕೆ ಸರಾಸರಿ 14 ಲಕ್ಷ ರೂಪಾಯಿ ವೆಚ್ಛವಾಗಿದೆ ಎಂದು ದೂರಿದರು.

    ಐದು ವರ್ಷಗಳ ಅವಧಿ ಎಂದರೆ ಒಟ್ಟು 1,825 ದಿನಗಳು. 52 ಭಾನುವಾರಗಳು, 12 ಎರಡನೇ ಶನಿವಾರಗಳು ಮತ್ತು 20 ಕ್ಕೂ ಹೆಚ್ಚು ಸರ್ಕಾರ ರಜಾ ದಿನಗಳು ಸೇರಿದಂತೆ ಪ್ರತೀ ವರ್ಷಕ್ಕೆ 82 ದಿನಗಳಂತೆ, ಐದು ವರ್ಷಗಳಿಗೆ ಸುಮಾರು 410 ದಿನಗಳು ಸರ್ಕಾರೀ ರಜಾ ದಿನಗಳು ಆಗುತ್ತವೆ. ಆದರೂ, ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಛೇರಿಯು ಒಂದು ದಿನವೂ ರಜೆಯಿಲ್ಲದೆ ಎಲ್ಲಾ ಭಾನುವಾರಗಳು, ಎರಡನೇ ಶನಿವಾರಗಳು ಮತ್ತು ಎಲ್ಲಾ ಸರ್ಕಾರೀ ರಜಾ ದಿನಗಳಲ್ಲೂ ಕಾರ್ಯ ನಿರ್ವಹಿಸಿದೆಯೆಂದು ಭಾವಿಸಿದರೂ ಸಹ ಐದು ವರ್ಷಗಳ ಅವಧಿಯ ಒಟ್ಟು 1,825 ದಿನಗಳಲ್ಲಿ ಸಿದ್ಧರಾಮಯ್ಯ ಅವರ ಅಧಿಕೃತ ಕಛೇರಿಯ ಸಭೆಗಳಲ್ಲಿ ಮತ್ತು ಅತಿಥಿ ಗಣ್ಯರ ಉಪಚಾರಗಳ ಹೆಸರಿನಲ್ಲಿ ಕಾಫೀ – ತಿಂಡಿ – ಸ್ನಾಕ್ಸ್ – ಉಪಹಾರಗಳಿಗೆಂದು ಪ್ರತೀ ದಿನವೊಂದಕ್ಕೆ ಸರಾಸರಿ ₹. 10,99,339/- ಗಳನ್ನು ವೆಚ್ಛ ಮಾಡಲಾಗಿದೆ. ಇದು ಕೇಳಲು ಹಾಸ್ಯ ಪ್ರಸಂಗದಂತಿದ್ದರೂ ಸಹ ದಾಖಲೆಗಳು ಅಸಲೀ ಸತ್ಯವನ್ನು ಬಿಚ್ಚಿಡುತ್ತಿವೆ. ಈ ನಂಬಲಸಾಧ್ಯವಾದಂತಹ ದಾಖಲೆಗಳಿಂದ 2013-14 ರಿಂದ 2017-18 ರವರೆಗಿನ ಐದು ವರ್ಷಗಳಲ್ಲಿ ನಕಲಿ ದಾಖಲೆಗಳನ್ನು ತಯಾರಿಸಿ ಒಟ್ಟು ₹. 200,62,93,027/- ಗಳನ್ನು ಲೂಟಿ ಮಾಡಿರುವುದು ಬಟಾಬಯಲಾಗಿದೆ ಎಂದು ಎನ್. ಆರ್ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

    ಅಂದಿನ ಮುಖ್ಯಮಂತ್ರಿಗಳ ಕಛೇರಿಯ ಈ ನಂಬಲಸಾಧ್ಯವಾದ ವೆಚ್ಛಗಳ ಬಗ್ಗೆ Office of the Principal Accountant General, Karnataka ದವರು ನೀಡಿರುವ ಲೆಕ್ಕ ಪರಿಶೋಧನಾ ವರದಿಯಲ್ಲಿ ತಮ್ಮ ತೀವ್ರ ಆಕ್ಷೇಪಣೆಗಳನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಿವೆ.

    ಆದರೂ, ಭ್ರಷ್ಟಾಚಾರದ ಪಿತಾಮಹ ಸಿದ್ಧರಾಮಯ್ಯ ಅವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಮೂಲಕ ತಾವೆಂಥ ಭಂಢ ರಾಜಕಾರಣಿ ಎಂಬುದನ್ನು ಜಗಜ್ಜಾಹೀರುಪಡಿಸಿದ್ದಾರೆ. ಕಳೆದ 75 ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ 25 ಮಂದಿ ಮುಖ್ಯಮಂತ್ರಿಗಳ ಪೈಕಿ, ಬೇರೆ ಇನ್ಯಾವ ಮುಖ್ಯಮಂತ್ರಿಗಳ ಅವಧಿಯಲ್ಲೂ ಸಹ ನಡೆಯದ “ಅತಿಥಿ ಉಪಚಾರ”ದ ಹೆಸರಿನ ಇಂತಹ ಭ್ರಷ್ಟಾಚಾರ ಸಿದ್ಧರಾಮಯ್ಯನವರ ಅವಧಿಯಲ್ಲಿ ನಡೆದಿದೆ. ಹಾಸಿಗೆ – ದಿಂಬು, ಇಂದಿರಾ ಕ್ಯಾಂಟೀನ್ ತಿಂಡಿ, ನೆಲದಡಿಯ ಕಸದ ಡಬ್ಬಗಳು ಮತ್ತು LED ದೀಪಗಳ ಅಳವಡಿಕೆಯಂತಹ ಯೋಜನೆಗಳ ಹೆಸರಿನಲ್ಲೂ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ ಕೇವಲ ಮುಖ್ಯಮಂತ್ರಿಗಳ ಕಛೇರಿಯ ಕಾರ್ಯಗಳಿಗೆ ಕಾಫೀ – ತಿಂಡಿ – ಬಿಸ್ಕೇಟ್ ಪೂರೈಕೆ ಹೆಸರಿನಲ್ಲೂ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವುದನ್ನು ನೋಡಿದರೆ, ಇಂತಹ ಬೃಹತ್ ಭ್ರಷ್ಟಾಚಾರಗಳ ಸರ್ಕಾರ ದೇಶದಲ್ಲಿ ಮತ್ತೊಂದಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಸರ್ಕಾರದ ಯಾವೊಂದು ಯೋಜನೆಗಳನ್ನೂ ಬಿಡದೆ, ಎಲ್ಲದರಲ್ಲೂ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದ ಸಿದ್ಧರಾಮಯ್ಯನವರ ಸರ್ಕಾರವು – ಕೊನೆಗೆ ಕಾಫೀ – ತಿಂಡಿ – ಉಪಹಾರದ ಹೆಸರಿನಲ್ಲೂ ಬೃಹತ್ ಮೊತ್ತದ ವಂಚನೆ ಎಸಗಿದೆ.

    ಮುಖ್ಯಮಂತ್ರಿಗಳ ಕಛೇರಿಯ ಸಭೆಗಳು ಮತ್ತು ಅವರ ಕಛೇರಿಗೆ ಆಗಮಿಸಿರುವ ಅತಿಥಿ , ಗಣ್ಯರ ಉಪಚಾರ ಕಾರ್ಯಗಳಿಗೆ ಕಾಫೀ – ತಿಂಡಿ – ಸ್ನಾಕ್ಸ್ – ಉಪಹಾರ ಪೂರೈಕೆಯ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವ ಈ ಬೃಹತ್ ಹಗರಣವನ್ನು CBI ಅಥವಾ CID ತನಿಖೆಗೆ ವಹಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಎನ್,ಆರ್ ರಮೇಶ್ ಆಗ್ರಹಿಸಿದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

     

    admin
    • Website

    Related Posts

    ಗುಬ್ಬಿ: ಆ.17ರಿಂದ22ರವರೆಗೆ  ಕೇರಳದ ಸಮರ ಕಲೆ ಕಲರಿಪಯಟ್ಟು ಶಿಬಿರ

    August 12, 2026

    ಸರಗೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ₹3.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಚಾಲನೆ

    August 12, 2026

    ಸಚಿವ ಈಶ್ವರ ಖಂಡ್ರೆ ಆಗಮನ ವೇಳೆ ಗದ್ದಲ: ಮುಜುಗರದಿಂದ ಪ್ರವಚನ ಅರ್ಧಕ್ಕೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ!

    August 12, 2026

    Comments are closed.

    Our Picks

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಸ್ವಾತಂತ್ರ್ಯ ದಿನಾಚರಣೆ : ಆ.14ರಂದು ವಿವಿಧ ಸ್ಪರ್ಧೆ

    August 12, 2026

    ತುಮಕೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ಆಗಸ್ಟ್ 14ರಂದು ಬೆಳಿಗ್ಗೆ 11 ಗಂಟೆಗೆ 5 ರಿಂದ…

    ಗುಬ್ಬಿ: ಆ.17ರಿಂದ22ರವರೆಗೆ  ಕೇರಳದ ಸಮರ ಕಲೆ ಕಲರಿಪಯಟ್ಟು ಶಿಬಿರ

    August 12, 2026

    ಆಟೋ ಹಾಗೂ ಟ್ಯಾಂಕರ್ ಡಿಕ್ಕಿ: ಆರು ಜನ ಕೂಲಿ ಕಾರ್ಮಿಕರ ದಾರುಣ ಸಾವು; ಸಚಿವ ಈಶ್ವರ ಖಂಡ್ರೆ ಸಂತಾಪ

    August 12, 2026

    ತುಮಕೂರು: ಮಹಾನ್ ಕ್ರಾಂತಿಕಾರಿ ಖುದಿರಾಮ್ ಬೋಸ್ 118ನೇ ಹುತಾತ್ಮ ದಿನಾಚರಣೆ – ಎಐಡಿಎಸ್ ಒ ವತಿಯಿಂದ ಶ್ರದ್ಧಾಂಜಲಿ

    August 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.