nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗುಂಪುಗಾರಿಕೆ ನಿಲ್ಲಿಸಿ | ದೊಡ್ಡಘಟ್ಟ ಚಂದ್ರೇಶ್ ಗೆ ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ

    February 11, 2026

    ಬ್ರಾಹ್ಮಣ, ಇತರರಿಗೆ ಮೀಸಲಾತಿ ಜಾರಿ, ಪರಿಶಿಷ್ಟ ಜಾತಿ, ವರ್ಗಕ್ಕೆ ಮೀಸಲಾತಿ ಜಾರಿ ವಿಳಂಬ: ಉಗ್ರಪ್ಪ ಕಿಡಿ

    February 11, 2026

    ಕಾರವಾರ: ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ

    February 11, 2026
    Facebook Twitter Instagram
    ಟ್ರೆಂಡಿಂಗ್
    • ಗುಂಪುಗಾರಿಕೆ ನಿಲ್ಲಿಸಿ | ದೊಡ್ಡಘಟ್ಟ ಚಂದ್ರೇಶ್ ಗೆ ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ
    • ಬ್ರಾಹ್ಮಣ, ಇತರರಿಗೆ ಮೀಸಲಾತಿ ಜಾರಿ, ಪರಿಶಿಷ್ಟ ಜಾತಿ, ವರ್ಗಕ್ಕೆ ಮೀಸಲಾತಿ ಜಾರಿ ವಿಳಂಬ: ಉಗ್ರಪ್ಪ ಕಿಡಿ
    • ಕಾರವಾರ: ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ
    • ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ಇನ್ನಿಲ್ಲ
    • ಪ್ರಪಥಮ ಬಾರಿಗೆ ಸಿದ್ದರಬೆಟ್ಟದಲ್ಲಿ ಅದ್ದೂರಿ ಮಹಾ ಶಿವರಾತ್ರಿ ಜಾಗರಣೆ ಮಹೋತ್ಸವ
    • ತಿಪಟೂರು: ನಿರ್ಗತಿಕರಿಗೆ ಆಸರೆಯಾದ ಧರ್ಮಸ್ಥಳ ಯೋಜನೆ:  201 ಫಲಾನುಭವಿಗಳಿಗೆ ಮಾಶಾಸನ, ‘ವಾತ್ಸಲ್ಯ ಕಿಟ್’ ವಿತರಣೆ
    • ನಮ್ಮಲ್ಲೆಲ್ಲ ಯುಸ್ ಲೆಸ್ ಆಫೀಸರ್ ಗಳು: ಡಿ.ಸಿ. ಎದುರೇ ಹರಿಹಾಯ್ದ ಕೆ.ಎನ್.ರಾಜಣ್ಣ
    • ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಕಾವಲುಬೀಳು ಗ್ರಾಮಸ್ಥರು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜೂನ್ ತಿಂಗಳಿನಲ್ಲಿ ಚಿಕ್ಕನಾಯಕನಹಳ್ಳಿಗೆ ಹಾಗೂ ತಿಪಟೂರು ಕ್ಷೇತ್ರಗಳಿಗೆ ಎತ್ತಿನಹೊಳೆ ನೀರು:ಸಿಎಂ ಬೊಮ್ಮಾಯಿ
    ತುಮಕೂರು March 17, 2023

    ಜೂನ್ ತಿಂಗಳಿನಲ್ಲಿ ಚಿಕ್ಕನಾಯಕನಹಳ್ಳಿಗೆ ಹಾಗೂ ತಿಪಟೂರು ಕ್ಷೇತ್ರಗಳಿಗೆ ಎತ್ತಿನಹೊಳೆ ನೀರು:ಸಿಎಂ ಬೊಮ್ಮಾಯಿ

    By adminMarch 17, 2023No Comments2 Mins Read
    bommay

    ತುಮಕೂರು:ಎತ್ತಿನಹೊಳೆ ಯೋಜನೆಯ ಮೊದಲ ಹಂತದ ನೀರು ಬರುವ ಜೂನ್ ತಿಂಗಳಿನಲ್ಲಿ ಚಿಕ್ಕನಾಯಕನಹಳ್ಳಿಗೆ ಹಾಗೂ ತಿಪಟೂರು ಕ್ಷೇತ್ರಗಳಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಚಿಕ್ಕನಾಯಕನಹಳ್ಳಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.


    Provided by
    Provided by

    ಚಿಕ್ಕನಾಯಕನಹಳ್ಳಿಯಲ್ಲಿ 31500 ರೈತರಿಗೆ ಕಿಸಾನ್ ಸಮ್ಮಾನ್:

    ನಮ್ಮ ಸರ್ಕಾರ ಮೂರು ವರ್ಷಗಳಲ್ಲಿ ಹಲವಾರುವ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ.
    ಚಿಕ್ಕನಾಯಕನಹಳ್ಳಿಯಲ್ಲಿ 31500 ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿಕೃಷಿ ಸಮ್ಮಾನ್ ಯೋಜನೆ ಅಡಿಯಲ್ಲಿ ’53 ಲಕ್ಷ ರೈತರಿಗೆ 16000 ಕೋಟಿ ರೂ. ನೀಡಲಾಗಿದೆ. ಚಿಕ್ಕನಾಯಕನಹಳ್ಳಿಯಲ್ಲಿ 31500 ರೈತರಿಗೆ ಇಂದು ಕಿಸಾನ್ ಸಮ್ಮಾನ್ ಯೋಜನೆಯಡಿ 89 ಕೋಟಿ ರೂ. ದೊರೆತಿದೆ.

    ಪ್ರಧಾನ ಮಂತ್ರಿಕೃಷಿ ಸಿಂಚಯಿ ಯೋಜನೆಯಡಿ 3646 ರೈತರಿಗೆ ಲಾಭ ದೊರೆತಿದೆ. ನಗರಾಭಿವೃದ್ಧಿಯಡಿ ಹುಳಿಯಾರು, ಚಿಕ್ಕನಾಯಕನಹಳ್ಳಿ, ಹುಳಿಯಾರು ಪಟ್ಟಣಕ್ಕೆ ಅಮೃತ ಯೋಜನೆಯಡಿ15 ಕೋಟಿ ರೂವೆಚ್ಚದಲ್ಲಿ 38 ಕಾಮಗಾರಿ ಕೈಗೊಂಡಿದೆ. 176 ಮಹಿಳಾ ಸ್ವಸಹಾಯ ಸಂಘಕ್ಕೆ ರಾಜ್ಯದಲ್ಲಿ 17 ಲಕ್ಷ ರೂ.ಬಿಡುಗಡೆಯಾಗಿದೆ.

    ಜಲ್ ಜೀವನ್ ಮಿಷನ್ ಅಡಿಯಲ್ಲಿ 40 ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ. ಚಿಕ್ಕನಾಯಕನಹಳ್ಳಿಯ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 534 ಜನವಸರಿಯಲ್ಲಿ 50 ಸಾವಿರ ಮನೆಗಳಿಗೆ ನೀರು ಒದಗಿಸಲಾಗಿದೆ.
    ಇದರಿಂದ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದರು.

    ಜನರ ರಾಜಕಾರಣ:

    ಮಾಧುಸ್ವಾಮಿ ಅವರೊಂದಿಗೆ ನಮ್ಮದು ಮೂವತೈದು ವರ್ಷದ ಸ್ನೇಹ. ಮಾಧುಸ್ವಾಮಿ ಅವರು ಜನರ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಜನಪರ ನಿಲುವು ತೆಗೆದುಕೊಂಡವರು. ಅಧಿಕಾರ ಇದ್ದಾಗ ತಾವು ಯಾವುದಕ್ಕಾಗಿ ಹೋರಾಟ ಮಾಡಿದ್ದರೊ ಅದರ ಅನುಷ್ಠಾನಕ್ಕೆ ತರಲು ಕೆಲಸ ಮಾಡುತ್ತಾರೆ‌ ಎಂದರು.

    ದೊಡ್ಡ ಆಸ್ತಿ:

    ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. 4.50 ಟಿ. ಎಂ.ಸಿ ನೀರನ್ನು ಈ ಕ್ಷೇತ್ರದ 155 ಕೆರೆಗಳನ್ನು ತುಂಬಿಸಲಾಗುವುದು. ಬರಗಾಲ ಪೀಡಿತವಾದ ಪ್ರದೇಶದಲ್ಲಿ ಹೇಮಾವತಿ ಹತ್ತಿರವಿದ್ದರೂ ಕೂಡ ಎತ್ತರದ ಸ್ಥಳದ ಕಾರಣ ಏತ ನೀರಾವರಿ ಇಂದ ಮಾತ್ರ ನೀರು ನೀಡಬಹುದು. ಕೆಲವರು ಚುನಾವಣೆಗಾಗಿ ಕೆಲಸ ಮಾಡುತ್ತಾರೆ. ಮುತ್ಸದ್ದಿಗಳು ಮುಂದಿನ ಜನಾಂಗದ ಬಗ್ಗೆ ಯೋಚನೆ ಮಾಡುತ್ತಾರೆ‌. ಮಾಧುಸ್ವಾಮಿ ಅವರು ಮುತ್ಸದ್ದಿ ನಾಯಕ, ಅವರು ಜನೋಪಯೋಗಿ ಶಾಸಕರು. ಮಾಧುಸ್ವಾಮಿ ಅವರು ಹತ್ತು ಹಲವಾರು ವರ್ಷಗಳ ಕಾಲ ಭೂಮಿ ತಾಯಿಗೆ ನೀರುಣಿಸುವ ಕೆಲಸ ಮಾಡಿದ್ದಾರೆ.ಎಸ್.ಸಿ.ಎಸ್.ಟಿ ಮಕ್ಕಳಿಗೆ , ಹಿಂದುಳಿದವರಿಗೆ ಶಿಕ್ಷಣಕ್ಕೆ ಮಹತ್ವ ನೀಡಿದ್ದಾರೆ. ರೈತರು, ಕುಡಿಯುವ ನೀರಿಗೆ ಇದರಿಂದ ಅನುಕೂಲವಾಗುತ್ತದೆ. ಮಾಧುಸ್ವಾಮಿ ಅವರು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ನಮ್ಮ ಸರ್ಕಾರಕ್ಕೆ ದೊಡ್ಡ ಆಸ್ತಿ ಎಂದರು.

    ಪ್ರಗತಿಯನ್ನು ಬಿಂಬಿಸುವ ಜಿಲ್ಲೆ:

    ಹೇಮಾವತಿ ಯೋಜನೆ ಬ್ರಾಂಚ್ ಯಾದಾದರೂ ಹಲವಾರು ಗ್ರಾಮಗಳಿಗೆ ನೀರಿನ ಕೊರತೆಯಿದೆ. ಈ ಭಾಗದ ನೀರಾವರಿಗೆ ಅನುಮೋದನೆ ನೀಡಲಾಗಿದೆ.

    ತುಮಕೂರು ಒಂದು ಕಲ್ಪವೃಕ್ಷ ನಾಡುಕೃಷಿ, ಕೈಗಾರಿಕೆಯಲ್ಲಿ ಅಭಿವೃದ್ಧಿ ಯಾದರೆ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುತ್ತದೆ. ತುಮಕೂರಿನಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ‌. ಬೆಂಗಳೂರು ನಂತರ ಅತ್ಯಂತ ಪ್ರಮುಖ ನಗರ ತುಮಕೂರು. ಕರ್ನಾಟಕದ ಪ್ರಗತಿಯನ್ನು ಬಿಂಬಿಸುವ ಜಿಲ್ಲೆಯಾಗಿದೆ ಎಂದರು.

    ಕರ್ನಾಟಕದ ಭವಿಷ್ಯದ ಮುನ್ನುಡಿಯನ್ನು ತುಮಕೂರು ಬರೆಯಲಿದೆ:

    ದುಡಿಯುವ ಕೈಗೆ ಕೆಲಸ ಕೊಡುವ ಕೆಲಸವಾಗಿದೆ. ವಿಶೇಷ ಹೂಡಿಕೆ ಪ್ರದೇಶವನ್ನು ಮಾಡಲಾಗಿದೆ. ಕೈಗಾರಿಕಾ ಅಭಿವೃದ್ಧಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಕಾನೂನು ಪೂರಕವಾಗಿದೆ. ಕರ್ನಾಟಕದ ಭವಿಷ್ಯದ ಮುನ್ನುಡಿಯನ್ನು ತುಮಕೂರು ಬರೆಯಲಿದೆ ಎಂದರು.

    ಸಚಿವರಾದ ಜೆ.ಸಿ.ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ.ನಾಗೇಶ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

     

    admin
    • Website

    Related Posts

    ರೈತರು ತಮ್ಮ ಜಮೀನು ಮಾರಾಟ ಮಾಡಬೇಡಿ: ಶಾಸಕ ಬಿ.ಸುರೇಶ್ ಗೌಡ ಕಿವಿಮಾತು

    February 10, 2026

    ನವಜಾತ ಶಿಶುಗಳ ಆರೈಕೆ ಬಲಪಡಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸ್ಸು

    February 10, 2026

    ತುಮಕೂರು: ಬಾಣಾವರ ಗೇಟ್ ಬಳಿ ಭೀಕರ ಸರಣಿ ಅಪಘಾತ; ಮಾಜಿ ತಾಪಂ ಸದಸ್ಯ ಸೇರಿ ಇಬ್ಬರು ಸಾವು

    February 9, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುರುವೇಕೆರೆ

    ಗುಂಪುಗಾರಿಕೆ ನಿಲ್ಲಿಸಿ | ದೊಡ್ಡಘಟ್ಟ ಚಂದ್ರೇಶ್ ಗೆ ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ

    February 11, 2026

    ತುರುವೇಕೆರೆ: ಜೆಡಿಎಸ್ ಪಕ್ಷದಿಂದ ದೊಡ್ಡಘಟ್ಟ ಚಂದ್ರೇಶ್ ಟಿಕೆಟ್ ಕೇಳಲಿ ಅಭ್ಯಂತರವಿಲ್ಲ, ಅದನ್ನು ಬಿಟ್ಟು ಕಾರ್ಯಕ್ರಮದ ನೆಪದಲ್ಲಿ ಕಾರ್ಯಕರ್ತರ ನಡುವೆ ಜೆಡಿಎಸ್‌…

    ಬ್ರಾಹ್ಮಣ, ಇತರರಿಗೆ ಮೀಸಲಾತಿ ಜಾರಿ, ಪರಿಶಿಷ್ಟ ಜಾತಿ, ವರ್ಗಕ್ಕೆ ಮೀಸಲಾತಿ ಜಾರಿ ವಿಳಂಬ: ಉಗ್ರಪ್ಪ ಕಿಡಿ

    February 11, 2026

    ಕಾರವಾರ: ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ

    February 11, 2026

    ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ ಇನ್ನಿಲ್ಲ

    February 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.