nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮುಖ್ಯಮಂತ್ರಿಗಳ ಸಾಧನ ಸಮಾವೇಶಕ್ಕೆ ಭರ್ಜರಿ ಸಿದ್ಧತೆ: ಹಳ್ಳಿ ಹಳ್ಳಿಗೂ ತಲುಪಿ ಆಹ್ವಾನ ನೀಡುತ್ತಿರುವ ಕಂದಾಯ ಅಧಿಕಾರಿಗಳು 

    May 13, 2026

    ನೀಟ್ ಯುಜಿ ಪರೀಕ್ಷೆ ರದ್ದು: ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನೊಂದಿಗೆ NTA ಚೆಲ್ಲಾಟ: AIDSO

    May 13, 2026

    ನಾಲ್ಕು ತಿಂಗಳಿನಿಂದ ಗೌರವಧನವಿಲ್ಲ: ರಾಜ್ಯ, ಕೇಂದ್ರ ಸರ್ಕಾರಗಳಿಂದ ವಿಳಂಬ ನೀತಿ: ಆಶಾಕಾರ್ಯಕರ್ತೆಯರಿಂದ ಪ್ರತಿಭಟನೆ

    May 12, 2026
    Facebook Twitter Instagram
    ಟ್ರೆಂಡಿಂಗ್
    • ಮುಖ್ಯಮಂತ್ರಿಗಳ ಸಾಧನ ಸಮಾವೇಶಕ್ಕೆ ಭರ್ಜರಿ ಸಿದ್ಧತೆ: ಹಳ್ಳಿ ಹಳ್ಳಿಗೂ ತಲುಪಿ ಆಹ್ವಾನ ನೀಡುತ್ತಿರುವ ಕಂದಾಯ ಅಧಿಕಾರಿಗಳು 
    • ನೀಟ್ ಯುಜಿ ಪರೀಕ್ಷೆ ರದ್ದು: ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನೊಂದಿಗೆ NTA ಚೆಲ್ಲಾಟ: AIDSO
    • ನಾಲ್ಕು ತಿಂಗಳಿನಿಂದ ಗೌರವಧನವಿಲ್ಲ: ರಾಜ್ಯ, ಕೇಂದ್ರ ಸರ್ಕಾರಗಳಿಂದ ವಿಳಂಬ ನೀತಿ: ಆಶಾಕಾರ್ಯಕರ್ತೆಯರಿಂದ ಪ್ರತಿಭಟನೆ
    • ತುಮಕೂರು: ಅಮ್ಲಾಪುರದ ಮದರಸಾದಲ್ಲಿ ಹೊರ ರಾಜ್ಯದ ಮಕ್ಕಳಿಗೆ ಹಿಂಸೆ: ಓಡಿಬಂದ 24 ಮಕ್ಕಳ ರಕ್ಷಣೆ
    • ವಡೇರಹಳ್ಳಿಯಲ್ಲಿ ಬಫರ್ ಡ್ಯಾಂ ವಿರೋಧಿಸಿ ರೈತರು, ಗ್ರಾಮಸ್ಥರಿಂದ ಪ್ರತಿಭಟನೆ
    • ಬೌದ್ಧ ಧರ್ಮವು ಸಮಾನತೆ,  ಸೌಹಾರ್ದತೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ: ಹರಾ ಮಹೇಶ್
    • ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ: ಶಾಸಕ ಡಾ.ಎಚ್.ಡಿ.ರಂಗನಾಥ್
    • ಪಾವಗಡ: ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಏ. 10ರೊಳಗೆ ಕಾಂಗ್ರೆಸ್ ನ 2ನೇ ಪಟ್ಟಿ ಪ್ರಕಟ: ಸತೀಶ್ ಜಾರಕಿಹೊಳಿ
    ಜಿಲ್ಲಾ ಸುದ್ದಿ April 3, 2023

    ಏ. 10ರೊಳಗೆ ಕಾಂಗ್ರೆಸ್ ನ 2ನೇ ಪಟ್ಟಿ ಪ್ರಕಟ: ಸತೀಶ್ ಜಾರಕಿಹೊಳಿ

    By adminApril 3, 2023No Comments2 Mins Read
    sathish jaraki holi

    ಬೆಳಗಾವಿ: ಕಾಂಗ್ರೆಸ್‌ನ 1ನೇ ಪಟ್ಟಿ ಈಗಾಗಲೇ ಬಿಡುಗಡೆಗೊಳಿಸಿದ್ದು, 2ನೇ ಪಟ್ಟಿಯನ್ನು ಏ. 10ರೊಳಗೆ ಬಿಡುಗಡೆಗೊಳಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

    ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 12 ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. 10ರಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಮೂರು ಕ್ಷೇತ್ರದಲ್ಲಿ ಗೊಂದಲ ಇದೆ. ಅದನ್ನು ಶೀಘ್ರ ಇತ್ಯರ್ಥ ಪಡಿಸಲಾಗುವುದು. ಮೊದಲನೇ ಹಂತದಲ್ಲಿ ಹಾಲಿ, ಮಾಜಿ ಶಾಸಕರೂ ಇದ್ದಾರೆ. ರಾಯಬಾಗ, ಸವದತ್ತಿಯಲ್ಲಿಯೂ ಸಾಕಷ್ಟು ಗೊಂದಲ ಇದೆ. ಅದನ್ನು ಸಂಧಾನ ಮಾಡಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.


    Provided by
    Provided by

    ಗೆಲ್ಲುವ ಅಭ್ಯರ್ಥಿ, ಜನರ ಜೊತೆಗೆ ನಿಕಟ ಸಂಪರ್ಕ ಹೊಂದಿರುವವರಿಗೆ ಟಿಕೆಟ್ ನೀಡಲಾಗುವುದು. ಕೆಲ ಮತಕ್ಷೇತ್ರದಲ್ಲಿ ಗೊಂದಲ‌ ಇದೆ. ಅದನ್ನು ಬಗೆ ಹರಿಸಲಾಗುವುದು. ಈಗಾಗಲೇ ಸಂಧಾನ ಸಭೆ ನಡೆಸಿ ಅಸಮಾಧಾನಿತರನ್ನು ಮನವೊಲಿಸಲಾಗುವುದು ಎಂದು ತಿಳಿಸಿದರು.

    ಕಳೆದ ಬಾರಿಯ ಬಂಡಾಯದಿಂದ ಸವದತ್ತಿ ಹಾಗೂ ರಾಯಬಾಗ ಕ್ಷೇತ್ರವನ್ನು ಕಳೆದುಕೊಂಡಿದ್ದೇವು. ಆದರೆ ಈ ಸಾರಿ ಹೊಂದಾಣಿಕೆ ಮಾಡುವುದರ ಮೂಲಕ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿಯನ್ನು ಹೈಕಮಾಂಡ್ ‌ನೀಡಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಗೆ ಬರುವ ಮಾಹಿತಿ ಇಲ್ಲ. ಆದರೆ ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸಮರ್ಥವಾಗಿದ್ದಾರೆ ಎಂದರು.

    ರಾಮದುರ್ಗ ಮತಕ್ಷೇತ್ರದಲ್ಲಿ ಯಾವುದೇ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಇಲ್ಲ. ಕೆಲವರು ಸುದ್ದಿಗೋಷ್ಠಿ ನಡೆಸಿ ನಾನು ರಾಮದುರ್ಗದ ಬಂಡಾಯದ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅವರು ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ ಎಂದು ಹೇಳಿದರು.

    ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವರುಣಾ ಮತಕ್ಷೇತ್ರದ 40 ವರ್ಷಗಳಿಂದ ಕೈ ಹಿಡಿದಿದೆ. ಅವರ ಗೆಲುವಿಗೆ ಶ್ರಮಿಸುವ ಅಗತ್ಯ ಇಲ್ಲ. ಅವರು ಗೆದ್ದೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸಮರ್ಥವಾದ ಕಾಂಗ್ರೆಸ್ ಅಭ್ಯರ್ಥಿಯನ್ನು ಸ್ಥಳೀಯರಿಗೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಹೊರಗಿನಿಂದ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಯಮಕನಮರಡಿ ಮತಕ್ಷೇತ್ರದ ಈ ಬಾರಿ ಪ್ರಚಾರ ನಡೆಸುತ್ತೇನೆ. ಇಲ್ಲದಿದ್ದರೇ ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಾರೆ. ಕಳೆದ ಬಾರಿಯೂ ಅಪಪ್ರಚಾರ ಮಾಡಿದ್ದರಿಂದ ಗೆಲುವಿನ ಅಂತರ ಕಡಿಮೆಯಾಗಿತ್ತು.‌ಆದ್ದರಿಂದ ಈ ಬಾರಿ ಪ್ರಚಾರಕ್ಕೆ ಹೋಗುತ್ತೇನೆ. ಅಲ್ಲದೆ ಚುನಾವಣೆಯ ಪ್ರಚಾರದ ವಾಹನವನ್ನು ಸ್ಮಶಾನದಲ್ಲಿ ಪೂಜೆ ಸಲ್ಲಿಸಿ ಪ್ರಾರಂಭಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

    ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಸುನೀಲ ಹನುಮಣ್ಣವರ, ರಾಜೇಂದ್ರ ಪಾಟೀಲ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ‌‌ರಾವ್‌ ಚಿಂಗಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

     

    admin
    • Website

    Related Posts

    ಸಚಿವ ಡಿ. ಸುಧಾಕರ್ ನಿಧನ: ಚಿತ್ರದುರ್ಗ ಜಿಲ್ಲೆಗೆ ನಾಳೆ ರಜೆ, ರಾಜ್ಯಾದ್ಯಂತ 3 ದಿನ ಶೋಕಾಚರಣೆ ಘೋಷಣೆ

    May 10, 2026

    ಭದ್ರಾವತಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಕೊಲೆ; ಪತ್ನಿ ಹಾಗೂ ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ

    May 10, 2026

    ಕಾರವಾರ: ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ: ನ್ಯಾ.ಕವಿತಾ ಎಸ್.ಉಂಡೋಡಿ

    May 9, 2026

    Comments are closed.

    Our Picks

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಮುಖ್ಯಮಂತ್ರಿಗಳ ಸಾಧನ ಸಮಾವೇಶಕ್ಕೆ ಭರ್ಜರಿ ಸಿದ್ಧತೆ: ಹಳ್ಳಿ ಹಳ್ಳಿಗೂ ತಲುಪಿ ಆಹ್ವಾನ ನೀಡುತ್ತಿರುವ ಕಂದಾಯ ಅಧಿಕಾರಿಗಳು 

    May 13, 2026

    ಪಾವಗಡ: ಮೇ 20ರಂದು ತುಮಕೂರು ನಗರದಲ್ಲಿ ನಡೆಯಲಿರುವ ಸರ್ಕಾರದ ಮೂರನೇ ವರ್ಷದ ಸಾಧನ ಸಮಾವೇಶದ ಅಂಗವಾಗಿ ಪಾವಗಡ ತಾಲೂಕಿನಲ್ಲಿ ಭರ್ಜರಿ…

    ನೀಟ್ ಯುಜಿ ಪರೀಕ್ಷೆ ರದ್ದು: ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನೊಂದಿಗೆ NTA ಚೆಲ್ಲಾಟ: AIDSO

    May 13, 2026

    ನಾಲ್ಕು ತಿಂಗಳಿನಿಂದ ಗೌರವಧನವಿಲ್ಲ: ರಾಜ್ಯ, ಕೇಂದ್ರ ಸರ್ಕಾರಗಳಿಂದ ವಿಳಂಬ ನೀತಿ: ಆಶಾಕಾರ್ಯಕರ್ತೆಯರಿಂದ ಪ್ರತಿಭಟನೆ

    May 12, 2026

    ತುಮಕೂರು: ಅಮ್ಲಾಪುರದ ಮದರಸಾದಲ್ಲಿ ಹೊರ ರಾಜ್ಯದ ಮಕ್ಕಳಿಗೆ ಹಿಂಸೆ: ಓಡಿಬಂದ 24 ಮಕ್ಕಳ ರಕ್ಷಣೆ

    May 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.