ತುಮಕೂರು : ಕ್ಯಾಂಟರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ಗಂಭೀರ ಗಾಯಗೊಂಡ ಘಟನೆ ತುಮಕೂರು ತಾಲ್ಲೂಕಿನ ಓಬಳಾಪುರದಲ್ಲಿ ನಡೆದಿದೆ.
ರವಿಕುಮಾರ್ ಗಂಭೀರವಾಗಿ ಗಾಯಗೊಂಡವರು. ಗಾಯಗೊಂಡ ರವಿಕುಮಾರ್ ಅವರನ್ನ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಇನ್ನು ಗಾಯಗೊಂಡ ರವಿಕುಮಾರ್ ಮಧುಗಿರಿ ತಾಲ್ಲೂಕಿನ ಬಡಚೌಡನಹಳ್ಳಿ ಗ್ರಾಮದ ನಿವಾಸಿ. ಕ್ಯಾಂಟರ್ ಸ್ಟೇರಿಂಗ್ ಲಾಕ್ ಆದ ಪರಿಣಾಮ ಈ ಘಟನೆ ನಡೆದಿದೆ ಅಂತಾ ಸ್ಥಳೀಕರು ತಿಳಿಸಿದ್ದಾರೆ.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA