ಎಮ್ಮೆ, ಕೋಣ ಕಡಿದು ಹಾಕುವುದಾದ್ರೆ ಹಸು ಏಕೆ ಕಡಿಯಬಾರದು? ಎಂಬ ಸಚಿವ ಕೆ.ವೆಂಕಟೇಶ್ ಹೇಳಿಕೆಗೆ ಚಕ್ರವರ್ತಿ ಸೂಲಿಬೆಲೆ ತಿರುಗೇಟು ಕೊಟ್ಟಿದ್ದಾರೆ.
ಪಶುಸಂಗೋಪನೆ ಸಚಿವರು ಅಂದ್ರೆ ಪಶುಗಳನ್ನು ಕಾಪಾಡುವುದು. ಪಶುಸಂಗೋಪನೆ ಸಚಿವರೇ ಹಸು ಕಡಿಯಬೇಕು ಅಂತಾ ಹೇಳ್ತಾರೆ. ಸಚಿವರು ಹಸು ಕಡಿಯುವುದಕ್ಕೆ ಬೇರೆ ಬೇರೆ ಕಾರಣ ಕೊಡ್ತಿದ್ದಾರೆ. ಇದನ್ನೆಲ್ಲ ಬಿಟ್ಟು ಮೊದಲು 200 ಯೂನಿಟ್ ಕರೆಂಟ್ ಕೊಡಲಿ. ಯಾವುದೇ ಷರತ್ತು ಇಲ್ಲದೆ ಕರೆಂಟ್ ಕೊಡುವ ಕೆಲಸ ಮಾಡಲಿ.
ಮುಸ್ಲಿಮರಿಂದ ಶೇ.80ರಷ್ಟು ಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದ ಜನರು ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸ್ತಿದ್ದಾರೆ. ಸರ್ಕಾರ ತನ್ನ ಅಸ್ತ್ರವನ್ನು ಹಿಟ್ಲರ್ ರೀತಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


