ಬೆಂಗಳೂರು-ಆರೋಗ್ಯ ಇಲಾಖೆಯಿಂದ ಹೊಸ ಕ್ಯೂ ಆರ್ ಕೋಡ್ ಬಿಡುಗಡೆಯಾಗಿದೆ. ಕ್ಯೂ ಆರ್ ಕೋಡ್ ಬಳಸಿ ಅಂಗಾಂಗ ದಾನ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಅಂಗಾಂಗ ದಾನ ಮಾಡುವವರಿಗೆ ನೋಂದಣಿ ಇನ್ನಷ್ಟೂ ಸುಲಭವಾಗಿದೆ.
ಹೊಸ ಆಲೋಚನೆಯೊಂದಿಗೆ ಇಲಾಖೆಯಿಂದ ಹೊಸ ಪ್ಲಾನ್ ನಡೆದಿದೆ. ಇನ್ಮುಂದೆ ಅಂಗಾಂಗ ದಾನ ಮಾಡಲು ಇಚ್ಚಿಸುವವರು ಆಸ್ಪತ್ರೆಗಳಿಗೆ ಸುತ್ತೋ ಹಾಗಿಲ್ಲ. ಕ್ಯೂ ಆರ್ ಕೋಡ್ ಮೂಲಕವೇ ದಾನಿಗಳಿಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ನೋಟೊ ಗೆ ಲಿಂಕ್ ಆಗಿರುವ ಕ್ಯೂ ಆರ್ ಇಲಾಖೆ ಬಿಡುಗಡೆ ಮಾಡಿದೆ.


