ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರು ಯಾರು ಪ್ಲೆಕ್ಸ್, ಬ್ಯಾನರ್ ಹಾಕದಂತೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಪ್ಲೆಕ್ಸ್, ಬ್ಯಾನರ್ ವಿಷಯವಾಗಿ ಬೆಂಗಳೂರು ಪದೇ ಪದೆ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗುತ್ತಿದ್ದು, ಈ ಮುಂಚೆ ಹೇಳಿದಂತೆ ಫೆಕ್ಸ್, ಬ್ಯಾನರ್ ಹಾಕಿದವವರಿಗೆ 50 ಸಾವಿರ ದಂಡ ವಿಧಿಸಲಾಗುವುದು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ, ನಾವೇ ತಪ್ಪು ಸಂದೇಶ ರವಾನಿಸುವುದು ಬೇಡ. ಬೆಂಗಳೂರಿನ ಘನತೆ, ಗೌರವ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಡಿಕೆಶಿ ಹೇಳಿದರು.


