ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯವು ಕಸ್ಟಮ್ಸ್ ಅಧಿಕಾರಿಗೆ 4ವರ್ಷ ಶಿಕ್ಷೆ ವಿಧಿಸಿದೆ ಹಾಗೂ 2 ಲಕ್ಷ ರೂ ದಂಡ ವಿಧಿಸಿದೆ.
ನ್ಯಾಯಾಧೀಶ ಮೋಹನ್ ಅವರಿದ್ದ ನ್ಯಾಯಾಲಯ ಕಸ್ಟಮ್ಸ್ ಅಧಿಕಾರಿ ಮೊಹಮದ್ ಶಫಿವುಲ್ಲಾ ವಿರುದ್ಧದ ಆರೋಪ ದೃಢವಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದೆ.
ಅಪರಾಧಿ 8.25 ಲಕ್ಷ ರಷ್ಟು ಅಕ್ರಮ ಆಸ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.


