ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ. ಲಡಾಖ್ ನ ಮೌಂಟ್ ಕುನಿಯಲ್ಲಿ ಹಿಮಪಾತ. ಒಬ್ಬ ಯೋಧ ವೀರ ಮರಣವನ್ನಪ್ಪಿದರೆ ಮೂವರು ನಾಪತ್ತೆಯಾಗಿದ್ದಾರೆ.
ನಿತ್ಯದ ತರಬೇತಿಯ ಅಂಗವಾಗಿ ಶಿಖರವನ್ನು ಹತ್ತುವಾಗ ಈ ಅವಘಡ ಸಂಭವಿಸಿದೆ. ಹೈ ಆಲ್ಟಿಟ್ಯೂಡ್ ವಾರ್ ಫೇರ್ ಸ್ಕೂಲ್ ಮತ್ತು ಸೇನೆಯ ಆರ್ಮಿ ಅಡ್ವೆಂಚರ್ ವಿಂಗ್ ನ 40 ಸೈನಿಕರು ತರಬೇತಿಯಲ್ಲಿ ಭಾಗವಹಿಸಿದ್ದರು.
ತರಬೇತಿ ಸಮಯದಲ್ಲಿ ಹಿಮ ಬೀಳುತ್ತಿತ್ತು. ಯೋಧನ ಮೃತದೇಹ ಪತ್ತೆಯಾಗಿದೆ. ಉಳಿದ ಮೂವರಿಗಾಗಿ ಶೋಧ ನಡೆಯುತ್ತಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


