ಯುವತಿಯೊಬ್ಬಳು ತನ್ನ ಇಬ್ಬರು ಸಹೋದರಿಯ ಶಿರಚ್ಛೇದ ಮಾಡಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೆಲವೇ ಗಂಟೆಗಳ ನಂತರ ಆರೋಪಿ ಯುವತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಜೈವೀರ್ ಸಿಂಗ್ ಅವರ ಪುತ್ರಿಯರಾದ ಸುರಭಿ (6) ಮತ್ತು ರೋಷ್ನಿ (4) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಮನೆಯ ವಿವಿಧ ಕೊಠಡಿಗಳಲ್ಲಿ ವಿಕೃತ ರೀತಿಯಲ್ಲಿ ಶವಗಳು ಪತ್ತೆಯಾಗಿವೆ ಎಂದು ಹೇಳಿದರು.
ಪೋಷಕರು ಇರದೇ ಇದ್ದಾಗ ಅಂಜಲಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಮಕ್ಕಳು ನೋಡಿದ್ದರು ಹಾಗಾಗಿ ಅವರನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಬಳಸಿದ ಗುದ್ದಲಿಯನ್ನು ಪೊಲೀಸರು ಅಪರಾಧ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಫೋರೆನ್ಸಿಕ್ ತಂಡವು ತನಿಖೆಗಾಗಿ ಸ್ಥಳದಿಂದ ಗುದ್ದಲಿಯನ್ನು ವಶಪಡಿಸಿಕೊಂಡಿದೆ.


