ತನ್ನ ಪ್ರಿಯತಮೆಯ ಖಾಸಗಿ ಫೋಟೋವನ್ನು ತಾನೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬಳಿಕ ಆಕೆಯ ಜೊತೆಯೇ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ಯುವಕನನ್ನು ಆಗ್ನೇಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಅಂಜಯ್ (26) ಬಂಧಿತ ಆರೋಪಿ.
ಈತ ಪ್ರಿಯತಮೆಯ ಫೋಟೊ ಹಾಕಿ ಅದರಿಂದ ಬರುವ ಅಶ್ಲೀಲ ಕಮೆಂಟ್ ನೋಡಿ ಖುಷಿ ಪಡುತ್ತಿದ್ದ. ಆರೋಪಿ ವಿಚಾರಣೆ ವೇಳೆ ಆತನ ಮತ್ತಷ್ಟು ಕಾಮಕೃತ್ಯ ಬಯಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.


