ಹಸಿರು ಪಟಾಕಿಗಳನ್ನು ಪತ್ತೆಹಚ್ಚಲು ಕ್ಯೂ ಆರ್ ಕೋಡ್ ಬಂದಿದೆ. ನಿಮ್ಮ ಮೊಬೈಲ್ ನಿಂದ ಪಟಾಕಿ ಬಾಕ್ಸ್ ಮೇಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ನೀವು ಖರೀದಿಸಿರುವುದು ಹಸಿರು ಪಟಾಕಿ ಹೌದ? ಅಲ್ಲವ ಎಂದು ಪರೀಕ್ಷಿಸಬಹುದು.
ತಮಿಳುನಾಡು ಪಟಾಕಿ ತಯಾರಕರ ಸಂಘದ ಉಪಾಧ್ಯಕ್ಷ ಅಯ್ಯನ್ ಬೆಂಗಳೂರಿನಲ್ಲಿ ಮಾತನಾಡಿ ಶಿವಕಾಶಿಯಲ್ಲಿ ಪಟಾಕಿ ತಯಾರಕರು ಹಸಿರು ಪಟಾಕಿ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಸಿರು ಲೋಗೋ ಹೊರತುಪಡಿಸಿ, ಈ ವರ್ಷ ಕ್ಯೂಆರ್ ಕೋಡ್ ಪರಿಕಲ್ಪನೆ ಹೊರತಂದಿದ್ದೇವೆ ಎಂದರು.


