ಮಾಜಿ ಪ್ರೇಯಸಿಯ ಮೇಲೆ ಯುವಕನೊಬ್ಬ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾದ ಘಟನೆ ಬೆಂಗಳೂರಿನ ಪೂರ್ವ ವಲಯದಲ್ಲಿ ನಡೆದಿದೆ.
ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿಯ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
ಇಬ್ಬರ ನಡುವೇ ಲವ್ ಬ್ರೇಕಪ್ ಆಗಿದ್ದರೂ ಯುವಕ ತನಗೆ ಮೆಸೇಜ್ ಮಾಡುವಂತೆ, ಫೋನ್ ಮಾಡುವಂತೆ ಒತ್ತಡ ಹಾಕುತ್ತಿದ್ದ. ಅದರಂತೆ ಮನೆಗೆ ನುಗ್ಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಮಾಡಿದ್ದಾನೆ ಎಂದು ಯುವತಿ ದೂರು ದಾಖಲಿಸಿದ್ದಾಳೆ.


