ಅಮೆಜಾನ್ ನಿಂದ ಆಪಲ್ ಮ್ಯಾಕ್ ಬುಕ್ ಆರ್ಡರ್ ಮಾಡಿದ ನಂತರ ಗ್ರಾಹಕನೊಬ್ಬ ಮುರಿದ HP ಲ್ಯಾಪ್ ಟಾಪ್ ಸ್ವೀಕರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣ ರೆಡಿಟ್ ಮೂಲಕ ತಿಳಿಸಿದ್ದಾನೆ. ಘಟನೆ ಎಲ್ಲಿ ಯಾವಾಗ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಆತ ಮುರಿದ ಲ್ಯಾಪ್ ಟಾಪ್ ಫೋಟೋ ಹಂಚಿಕೊಂಡಿದ್ದಾನೆ.
ನಾನು ಮ್ಯಾಕ್ಬುಕ್ ಏರ್ M1ಗಾಗಿ ಆರ್ಡರ್ ಮಾಡಿದ್ದೇ. ಆದರೆ ನಾನು ಮುರಿದ ಎಚ್ ಪಿ ಲ್ಯಾಪ್ ಟಾಪ್ ನ್ನು ಪಡೆದುಕೊಂಡಿದ್ದು, ಈ ಬಗ್ಗೆ ಅಮೆಜಾನ್ ಗೆ ದೂರು ನೀಡಿದ್ದೇನೆ ಎಂದು ಆತ ತಿಳಿಸಿದ್ದಾನೆ.


