ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಎಸ್ ಐಟಿ ಅಧಿಕಾರಿಗಳು ಅಂದಿನ ಸಿಸಿಬಿ ಎಸ್ ಪಿ ಆಗಿದ್ದ ಡಿವೈಎಸ್ಪಿ ಗೌತಮ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಡಿವೈಎಸ್ಪಿ ಗೌತಮ್ ಅವರಿಗೆ ನೋಟೀಸ್ ನೀಡಿ ಸತತ ಎರಡು ದಿನ ಎಸ್ ಐಟಿ ವಿಚಾರಣೆ ನಡೆಸಿದೆ.
ಗೌತಮ್ ವಿಚಾರಣೆ ಬೆನ್ನಲ್ಲೇ ಸಿಸಿಬಿ ಕಚೇರಿಯಲ್ಲೂ ಸಹ ಎಸ್ ಐಟಿ ಅಧಿಕಾರಿಗಳು ಮಹಜರ್ ಪ್ರಕ್ರಿಯೆ ನಡೆಸಿದ್ದಾರೆ. ಕೆಜಿ ನಗರ ಡ್ರಗ್ಸ್ ಕೇಸ್ ಪ್ರಕರಣ ಸಂಬಂಧ ಸಿಸಿಬಿ ಕಚೇರಿಯಲ್ಲಿ ಮಹಜರ್ ಪ್ರಕ್ರಿಯೆ ನಡೆಡಿದೆ.


