ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ಮತ್ತೊಂದು ಬೇಟೆಯಾಡಿದ್ದಾರೆ. ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ಪತ್ತೆಯಾದ ಎರಡೇ ದಿನಗಳಲ್ಲಿ ಬಿಲ್ಡರ್ ಸಂತೋಷ್ ನಿವಾಸದಲ್ಲಿ 40 ಕೋಟಿ ಕ್ಯಾಶ್ ಸಿಕ್ಕಿದೆ.
ರಾಜಾಜಿನಗರದ ಕೇತಮಾರನಹಳ್ಳಿ ಅಪಾರ್ಟ್ಮೆಂಟ್ ನಲ್ಲಿರುವ ಫ್ಲಾಟ್ ನಲ್ಲಿ ಈ ದುಡ್ಡು ಪತ್ತೆಯಾಗಿದೆ. ಇದೀಗ ಸಂತೋಷ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಇದು ಮಾಜಿ MLC ಯೊಬ್ಬರಿಗೆ ಸೇರಿದ ಹಣ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.


