ಈಗ ಹೊಸ ಮದ್ಯದಂಗಡಿಯನ್ನು ತೆರೆಯಲು ಲೈಸೆನ್ಸ್ ಕೊಡುವುದಿಲ್ಲ. ಆದರೆ, ಅಮಾನತಾಗಿದ್ದ, ರದ್ದಾಗಿದ್ದ, ನವೀಕರಣವಾಗದೇ ಬಾಕಿ ಉಳಿದಿದ್ದ ಮದ್ಯದಂಗಡಿ ತೆರೆಯಲು ಅನುವು ಮಾಡಿಕೊಡುವುದಾಗಿ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದ್ದಾರೆ.
ಈ ಬಗ್ಗೆ ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹೊಸ ಮದ್ಯದಂಗಡಿಗೆ ಲೈಸೆನ್ಸ್ ಕೊಡುವುದಿಲ್ಲ. ಆದರೆ, ಹಿಂದಿನ ಬಾಕಿ ಉಳಿದಿರುವ ಲೈಸೆನ್ಸ್ ಗಳು ಹಾಗೂ ಎಂಎಸ್ ಐಎಲ್ ಮದ್ಯದಂಗಡಿಗಳನ್ನು ತೆರಯಲು ಅಡ್ಡಿಯಿಲ್ಲ ಎಂದು ಹೇಳಿದ್ದಾರೆ.


