ಬೆಂಗಳೂರು: ಐದು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಕೋಗಿಲು ಲೇಔಟ್ ನ 3ನೇ ಕ್ರಾಸ್ ರಸ್ತೆ ನಿವಾಸಿ ಶಕೀಲ್ ಅಕ್ತರ್ ಸೈಫಿ(28) ಮೃತ. ಬಿಹಾರ ಮೂಲಕ ಶಕೀಲ್, ನಗರದಲ್ಲಿ ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಈತನ ಶವ ಮನೆಯ ಸಮೀಪದ ಮಾರ್ಟಿನ್ ಎಂಬುವವರ ನಿವೇಶನದ ಶೌಚ ಗುಂಡಿಯಲ್ಲಿ ಮೂಟೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂಪಿಗೆಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.


