ತಮಿಳುನಾಡು: ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿರುವ ಓಂ ಶಕ್ತಿ ದೇಗುಲದ ಪೀಠಾಧಿಪತಿ ಬಂಗಾರು ಅಡಿಗಳಾರ್ (82) ಅವರು ಸಂಜೆ ವಿಧಿವಶರಾಗಿದ್ದಾರೆ. ಅಡಿಗಳಾರ್ ಅವರನ್ನು ಭಕ್ತರು ‘ಓಂ ಶಕ್ತಿ ಅಮ್ಮ’ ಎಂದು ಕರೆಯುತ್ತಿದ್ದರು.
ಎಲ್ಲ ದಿನಗಳಲ್ಲೂ ದೇವಸ್ಥಾನದಲ್ಲಿ ಮಹಿಳೆಯರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿ ಅವರು ಕ್ರಾಂತಿ ಮಾಡಿದ್ದರು. ಅಡಿಗಳಾರ್ ಅವರ ಆಧ್ಯಾತ್ಮಿಕ ಸೇವೆಗೆ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದುಬಂದಿತ್ತು. ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ವರದಿ : ಆಂಟೋನಿ ಬೇಗೂರು


