ಬೆಂಗಳೂರು : ದ್ವಿಚಕ್ರ ವಾಹನಗಳು ಹಾಗೂ ಕಾರು ಕದ್ದು, ಅವುಗಳಲ್ಲಿ ಸುತ್ತಾಡಿ ಸುಲಿಗೆ ಮಾಡುತ್ತಿದ್ದ ಆರೋಪದಡಿ 6 ಜನರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಹಲವು ಕಡೆಗಳಲ್ಲಿ ವಾಹನ ಕಳವು ಹಾಗೂ ಸುಲಿಗೆ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳಾದ ಕೋಲಾರ ಜಿಲ್ಲೆಯ ನ್ಯಾಮತ್ ಉಲ್ಲಾ (22), ಗೋವಿಂದಪುರದ ಅಸ್ರಾನ್ ಅಹಮ್ಮದ್ (25), ಸೈಯದ್ ಅಬ್ದುಲ್ ಫರ್ಜಾನ್ (20), ಸೈಯದ್ ಸಫಿ (24), ಸೈಪ್ ಉಲ್ಲಾ ಖಾನ್ (23) ಸೇರಿ ಆರು ಮಂದಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.


