ಚಿಕ್ಕಮಗಳೂರು: ವಿರೋಧದ ನಡುವೆ ಚಿಕ್ಕಮಗಳೂರಿನಲ್ಲಿ ಮಹಿಷ ದಸರಾ ಆಚರಣೆಗೆ ಸಿದ್ದತೆ ಮಾಡಲಾಗಿದೆ. ಹೌದು, ಜಿಲ್ಲೆಯಾದ್ಯಂತ ತೀವ್ರ ವಿರೋಧ, ನಿಷೇಧಾಜ್ಞೆ ನಡುವೆಯೇ ಮಹಿಷ ದಸರಾಕ್ಕೆ ಸಿದ್ದತೆ ಮಾಡಿಕೊಂಡಿದೆ.
ಹನುಮಂತಪ್ಪ ಸರ್ಕಲ್ನಿಂದ ಪ್ರಮುಖ ರಸ್ತೆಗಳಲ್ಲಿ ಮಹಿಷ ಮೆರವಣಿಗೆ ಜೊತೆಗೆ ಆಝಾದ್ ಪಾರ್ಕ್ ಬಳಿ ಬಹಿರಂಗ ಸಮಾವೇಶಕ್ಕೆ ಸಿದ್ದತೆ ನಡೆದಿದೆ. ಮಹಿಷ ದಸರಾಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ಅನುಮತಿ ನಿರಾಕರಣೆ ಮಾಡಿತ್ತು. ಈ ಹಿನ್ನಲೆ ಅ.19 ರಿಂದ 24 ರ ವರೆಗೂ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.


