ಬಿಟ್ ಕಾಯಿನ್ ನೆಪದಲ್ಲಿ ಹಣ ಡಬಲ್ ಮಾಡುತ್ತೇವೆ ಎಂದು ಜನರಿಂದ ಲಕ್ಷಾಂತರ ರೂ. ಹಣ ಪಡೆದು ಮೋಸ ಮಾಡುತ್ತಿದ್ದ ಅಪ್ಪ-ಮಗನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ತಂದೆ ಸತೀಶ್, ಮಗ ಶ್ರೀಕಾಂತ್ ಬಂಧಿತ ಆರೋಪಿಗಳು. ಇನ್ನು ಸತೀಶ್, ಬೆಂಗಳೂರಿನ ಗಾಂಧಿಬಜಾರ್, ಅವೆನ್ಯೂ ರೋಡ್, ಬಳೆ ಪೇಟೆ ಹಾಗೂ ಬಸವನಗುಡಿ ಸೇರಿ ಒಟ್ಟು 4 ಕಡೆ ಇರುವ ಪಂಚ ಐಶ್ವರ್ಯ ಕೋ ಆಪರೇಟಿವ್ ಸೊಸೈಟಿ ಪಾಲುದಾರರಾಗಿದ್ದಾರೆ.
ಸಾರ್ವಜನಿಕರಿಂದ ನಿಮ್ಮ ಹಣ ಡಬಲ್ ಮಾಡುತ್ತೀವಿ ಎಂದು ಹಣ ಪೀಕುತ್ತಿದ್ದವರು ಈಗ ಅಂದರ್ ಆಗಿದ್ದಾರೆ.


