ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಮಿಷನ್ ಮಹಿಳಾ ಸಾರಥಿ’ ಕಾರ್ಯಕ್ರಮ ಅಡಿಯಲ್ಲಿ ರಾಜ್ಯ ಸಾರಿಗೆ ನಿಗಮದ 51 ಬಸ್ ಗಳಿಗೆ ಚಾಲನೆ ನೀಡಿದರು.
ರಾಜ್ಯದ ಮಹಿಳೆಯರ ಸುರಕ್ಷತೆ, ಸ್ವಾವಲಂಬನೆ ಮತ್ತು ಗೌರವಕ್ಕೆ ಒತ್ತು ನೀಡಿರುವ ನಮ್ಮ ಸರ್ಕಾರ, ಮಿಷನ್ ಶಕ್ತಿಯ ನಾಲ್ಕನೇ ಹಂತದ ಮೂಲಕ ರಾಜ್ಯ ಸರ್ಕಾರವು ಈ ಆಲೋಚನೆಗಳನ್ನು ನಿರಂತರವಾಗಿ ಪ್ರಚಾರ ಮಾಡಿದೆ ಎಂದರು.
ಭಾರತೀಯ ಸಮಾಜವು ಯಾವಾಗಲೂ ಮಹಿಳೆಯರ ಘನತೆಯನ್ನು ಕಾಪಾಡುವುದರಲ್ಲಿ ನಂಬಿಕೆ ಇಟ್ಟಿದೆ. ಉತ್ತರ ಪ್ರದೇಶ ಸರ್ಕಾರವು ಮಿಷನ್ ಶಕ್ತಿಯ ನಾಲ್ಕನೇ ಹಂತದಲ್ಲಿ ಸುರಕ್ಷತೆ, ಗೌರವ ಮತ್ತು ಸ್ವಾವಲಂಬನೆಯ ಕ್ರಮಗಳನ್ನು ನಿರಂತರವಾಗಿ ಪ್ರೋತ್ಸಾಹಿಸಿದೆ.
ರಾಜ್ಯ ಸರ್ಕಾರದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಮಹಿಳೆಯರು ಎಲ್ಲ ವಿಧದ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ಮತ್ತು ಸಹೋದರಿಯರು ರಾಜ್ಯದ ಪೊಲೀಸ್ ಹಾಗೂ ಸರ್ಕಾರ ಮಟ್ಟದ ವಿವಿಧ ಪಾತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಸಾರಿಗೆ ನಿಗಮದಲ್ಲಿ ಮಹಿಳೆಯರೇ ಡ್ರೈವರ್ ಮತ್ತು ಕಂಡಕ್ಟರ್ ಆಗಬೇಕೆಂಬ ಆಸೆ ಈಡೇರಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.


