ಏರ್ ಇಂಡಿಯಾ ಬೆಂಗಳೂರು ಮತ್ತು ಸಿಂಗಾಪುರ ನಡುವೆ ತಡೆರಹಿತ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. ಹೊಸ ಸೇವೆಯು ಬೆಂಗಳೂರು ಹಾಗೂ ಸಿಂಗಾಪುರ ನಡುವೆ ನೇರ ಸಂಪರ್ಕ ಹೊಂದಿದೆ. ಏ ಇಂಡಿಯಾದ AI392 ವಿಮಾನವು ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹಾರಾಟ ಆರಂಭಿಸಲಿದೆ.
ಮರುದಿನ ಬೆಳಗ್ಗೆ 5.30ಕ್ಕೆ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ರಿಟರ್ನ್ ಫೈಟ್ AI393 ವಿಮಾನ ಸಿಂಗಾಪುರದಿಂದ ಬೆಳಿಗ್ಗೆ 6.40 ಕ್ಕೆ ಹೊರಟು ರಾತ್ರಿ 8.35 ಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದೆ.


