ಕೇರಳದ ಕೊಚ್ಚಿಯಲ್ಲಿ ಜೈಲರ್ ಸಿನಿಮಾ ನಟ ವಿನಾಯಗನ್ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾರೆ. ಹೀಗಾಗಿ ಕೊಚ್ಚಿ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಜೈಲರ್ ನಟ ವಿನಾಯಗನ್ ಬಂಧನ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅ.24ರಂದು ನಟನನ್ನು ಬಂಧಿಸಲಾಗಿದೆ.
ನಟ ವಿನಾಯಗನ್ ತನ್ನ ಅಪಾರ್ಟೆಂಟ್ ನಲ್ಲಿ ಕುಡಿದು ಗಲಾಟೆ ಮಾಡಿದ ಹಿನ್ನೆಲೆ ಆತನ ವಿರುದ್ಧ ದೂರು ದಾಖಲಿಸಲಾಗಿತ್ತು. ಹಾಗಾಗಿ ವಿನಾಯಗನ್ ಅವರನ್ನು ಬಂಧಿಸಲಾಗಿದೆ ಎಂದು ಕೇರಳದ ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.


