ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಯುವಕನೊಬ್ಬಈಜಲು ಹೋಗಿ ಭದ್ರಾ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಿಲಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೆಬ್ಬಾಳೆಯ ಭದ್ರಾ ನದಿಯಲ್ಲಿ ಮಂಗಳವಾರ ವದಿಯಾಗಿದೆ.
ಮೃತ ಯುವಕನನ್ನು ಬೆಂಗಳೂರಿನ ಶ್ರೀನಗರದ ನಿವಾಸಿ ಗೋಕುಲ್(25) ಎಂದು ಗುರುತಿಸಲಾಗಿದ್ದು, ಕಳಸ ಪೊಲೀಸರು, ಮುಳುಗು ತಜ್ಞರ ಸಹಾಯದಿಂದ ಯುವಕನ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ ಮತ್ತು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


