ವರದಿಗಳ ಪ್ರಕಾರ ಕೇವಲ ಹುಲಿ ಉಗುರಲ್ಲದೇ ಆನೆ ಬಾಲದ ಕೂದಲನ್ನ ಸಂಗ್ರಹ ಮಾಡಿರುವ ಬಗ್ಗೆಯೂ ಶೋಧಕ್ಕೆ ಮುಂದಾಗಿದ್ದಾರೆ. ಸ್ಮಗ್ಲಿಂಗ್ ಮೂಲಕ ಹುಲಿ ಉಗುರು ಹಾಗೂ ಆನೆ ಬಾಲದ ಕೂದಲನ್ನು ಸಂಗ್ರಹ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಆಭರಣದ ಶೋ ರೂಂ ಗಳ ಮೇಲೆ ದಾಳಿ ನಡೆಸಲು ಅರಣ್ಯಾಧಿಕಾರಿಗಳು ಪ್ಲಾನ್ ಮಾಡಿದ್ದಾರೆ.
ಹುಲಿ ಉಗುರಿನ ಲಾಕೆಟ್ ಧರಿಸಿದ್ದರಿಂದ ಹಳ್ಳಿಕಾರ್ ಸಂತೋಷ್ ಬಂಧನವಾದ ನಂತರ ಅರಣ್ಯಾಧಿಕಾರಿಗಳು ಹುಲಿ ಉಗುರು ಲಾಕೆಟ್ ಧರಿಸಿದ ಸೆಲೆಬ್ರೆಟಿಗಳಿಗೆ ನೋಟಿಸ್ ಜಾರಿ ಮಾಡಿದರು. ಇದೀಗ ಅರಣ್ಯಾಧಿಕಾರಿಗಳು ಮತ್ತೊಂದು ರೇಡ್ ಗೆ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಹುಲಿ ಉಗುರಿಗೆ ಪೆಂಡೆಂಟ್ ಮಾಡಿಕೊಡುವ ಆಭರಣ ಅಂಗಡಿಗಳ ಮಾಲೀಕರು ಎಲ್ಲಿಂದ ಹುಲಿ ಉಗುರು ತರ್ತಾರೆ ಎಂಬ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಸಿಐಡಿ, ಬಿಬಿಎಂಪಿ ಫಾರೆಸ್ಟ್ ಸೆಲ್ ಅಧಿಕಾರಿಗಳು ಹುಲಿ ಉಗುರು ಮಾರಾಟದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.


