ಇಡೀ ವಿಶ್ವಕ್ಕೆ ಅನುಭವ ಮಂಟಪದ ಮೂಲಕ ಸಂಸತ್ ನ ಪರಿಕಲ್ಪನೆ ನೀಡಿದವರು ಬಸವಣ್ಣ. ಕರ್ನಾಟಕ ರಾಜ್ಯಕ್ಕೆ ಬಸವಣ್ಣನ ನಾಡು ಎಂಬ ಹೆಸರಿಡುವ ಬೇಡಿಕೆ ಸ್ವಾಭಾವಿಕ, ಇದರಲ್ಲಿ ತಪ್ಪೇನೂ ಇಲ್ಲ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನು ಇಡೀ ಮೆಟ್ರೋ ಸಂಪರ್ಕ ಜಾಲಕ್ಕೂ ಬಸವಣ್ಣ ಎಂದು ಹೆಸರಿಡುವ ಬೇಡಿಕೆ ಇದೆ. ವಿಜಯಪುರ ವಿಮಾನ ನಿಲ್ದಾಣಕ್ಕೂ ಬಸವಣ್ಣನ ಹೆಸರಿಡಬೇಕು ಎಂಬ ವಾದವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದರು.


